ಕಾರ್ಕಳ

ಜ.30ರಂದು (ಇಂದು) ಮುನಿಯಾಲು ಕಾಡುಹೊಳೆಯಲ್ಲಿ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಲೋಕಾರ್ಪಣೆ

 

ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಕಾಡುಹೊಳೆಯ ಸಮೀಪ ಎಲ್ಲಾ ಆಧುನಿಕ ಸೌಕರ್ಯಗಳನ್ನೊಳಗೊಂಡ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ (ಇಂದು) ಜ. 30ರಂದು ಲೋಕಾರ್ಪಣೆಗೊಳ್ಳಲಿದೆ.

ಗ್ರಾಮೀಣ ಪ್ರದೇಶವಾದ ಮುನಿಯಾಲು ಪರಿಸರದಲ್ಲಿ ಸುಜಯ ಶೆಟ್ಟಿ ಹಾಗೂ ಗುರುಪ್ರಸಾದ್ ಶೆಟ್ಟಿಯವರ ಮಾಲಕತ್ವದ ಮಲ್ಟಿಪರ್ಪಸ್ ಹಾಲ್, ಕೆಮ್ಮಂಜ ಸೂಪರ್ ಮಾರ್ಕೇಟ್ ಸೇರಿದಂತೆ ಹಲವಾರು ಸವಲತ್ತುಗಳನ್ನು ಜನರಿಗೆ ನೀಡಿ ಇದೀಗ ಮುನಿಯಾಲು ಕಾಡುಹೊಳೆಯಲ್ಲಿ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಎಂಬ ಓಪನ್ ಹಾಲ್ ಪರಿಚಯಿಸುತ್ತಿದ್ದಾರೆ.

ಅಜೆಕಾರಿನಲ್ಲಿ ಈಗಾಗಲೇ ಕೆಮ್ಮಂಜ ಹಾಗೂ ಮಿಲನ್ ಹವಾನಿಯಂತ್ರಿತ ಮಲ್ಟಿಪರ್ಪಸ್ ಹಾಲ್, ಸುಧಣ್ಣ ಪ್ಯಾಮಿಲಿ ರೆಸ್ಟೋರೆಂಟ್, ವಸತಿಗೃಹಗಳು, ಕೆ.ಎಸ್. ಎಂ ಸ್ಪೋರ್ಟ್ಸ್ ಸೆಂಟರ್, ಅಜೆಕಾರು ಮೆಡಿಕಲ್ ಸೇರಿದಂತೆ ಪ್ರಗತಿ ಗಣೇಶ್ ಟ್ರೇಡ್ ಸೆಂಟರ್ ಮತ್ತು ಶಾಲೂಮ್ ಪ್ರಗತಿ ಟ್ರೇಡ್ ಸೆಂಟರ್ ಪ್ರಾರಂಭಿಸಿ ಪಟ್ಟಣವಾಗಿ ಮಾರ್ಪಾಡಿಸಿದ್ದಾರೆ.

ಕಾಡುಹೊಳೆಯಲ್ಲಿ ಓಪನ್ ಗಾರ್ಡನ್ ಹಾಲ್ ನಿರ್ಮಿಸಿದ್ದು ಜನರ ಬೇಡಿಕೆಗೆ ಅನುಗುಣವಾಗಿ ನಿರ್ಮಾಣಗೊಂಡಿದೆ. ೧೫೦೦ ಜನರು ಕುಳಿತುಕೊಳ್ಳುವ ಆಸನ ವ್ಯವಸ್ಥೆ ಇರುವ ಈ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್‌ನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ
ಕಲ್ಪಿಸಲಾಗಿದೆ. ಸುಸಜ್ಜಿತ ಅಡುಗೆ ವ್ಯವಸ್ಥೆ, ಡೈನಿಂಗ್ ಹಾಲ್, ಆಕರ್ಷಕ ವೇದಿಕೆ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ವಸತಿ ಯೋಜನೆ ಕಲ್ಪಿಸುವ ಸಂಕಲ್ಪವನ್ನು ಪ್ರವರ್ತಕರು ಇರಿಸಿಕೊಂಡಿದ್ದಾರೆ.


ಇಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅಜೆಕಾರು ದೇವಸ್ಯ ಶ್ರೀ ಶಿವರಾಮ ಜಿ. ಶೆಟ್ಟಿ ನೂತನ ಗಾರ್ಡನ್‌ನ್ನು ಉದ್ಘಾಟಿಸಲಿದ್ದಾರೆ.
ಅಜೆಕಾರು ಇಗರ್ಜಿಯ ಧರ್ಮ ಗುರುಗಳಾದ ರೆ| ಫಾ| ಹೆನ್ರಿ ಮಸ್ಕ್ಯಾರೇನ್ಹಸ್ ಆಶೀರ್ವಚನ ನೀಡಲಿದ್ದಾರೆ. ಅಜೆಕಾರು ಪದ್ಮ ಗೋಪಾಲ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ| ಸುಧಾಕರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಇದರ ಅಧ್ಯಕ್ಷರಾದ ವಿಜಯಭಾನು ಶೆಟ್ಟಿ, ಉದ್ಯಮಿ ದಿನೇಶ್ ಪೈ ಮುನಿಯಾಲು, ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮುಂಬೈ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಹರೀಶ್ ಶೆಟ್ಟಿ, ಬೈರಂಪಳ್ಳಿ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಜಿಯಾನಂದ ಹೆಗ್ಡೆ, ವರಂಗ ಗ್ರಾ.ಪಂ.ಅಧ್ಯಕ್ಷರಾದ ಸಂತೋಷ್ ಅಮೀನ್, ಕಟಪಾಡಿ ಪ್ರಜ್ವಲ್ ಕನ್‌ಸ್ಟ್ರಕ್ಷನ್ ದಯಾನಂದ ಶೆಟ್ಟಿ, ಮಂಗಳೂರು ಇಂಡಸ್ಟ್ರೀಯಲ್ ಸೊಲ್ಯೂಷನ್‌ನ ಯನ್ನೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಖ್ಯಾತ ಅಡುಗೆ ತಜ್ಞರಾದ ಶೀನ ಕುಲಾಲ್ ಬಿಲ್ಲಾಡಿ ಇವರನ್ನು ಸನ್ಮಾನಿಸಲಾಗುವುದು.

ಶುಭಾರಂಭ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ನೃತ್ಯ ವೈವಿಧ್ಯ ನಡೆಯಲಿದೆ. ನಂತರ ಕಾಪು ರಂಗತರಂಗ ಕಲಾವಿದರಿಂದ ಸಾಮಾಜಿಕ ಹಾಸ್ಯಮಯ ನಾಟಕ ಶೋಬಾಜಿ ಪ್ರದರ್ಶನಗೊಳ್ಳಲಿದೆ.

ಅತ್ಯಂತ ಆಕರ್ಷಣೀಯವಾಗಿ ನಿರ್ಮಿಸಲಾಗಿರುವ ಸುಧಣ್ಣಾಸ್ ರಿವರ್‌ವ್ಯೂ ಗಾರ್ಡನ್ ಲೋಕಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರವರ್ತಕರಾದ ಸುಜಯ ಶೆಟ್ಟಿ ಹಾಗೂ ಗುರುಪ್ರಸಾದ್ ಶೆಟ್ಟಿಯವರು ಮನವಿ ಮಾಡಿದ್ದಾರೆ.

 

 

Related posts

ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ: ವಾರ್ಷಿಕ ಮಹಾರಥೋತ್ಸವ

Madhyama Bimba

ಗೃಹ ಲಕ್ಷ್ಮೀಗೆ ಸಚಿವೆ ಲಕ್ಷ್ಮೀಯೇ ಕಂಟಕ: ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಖಂಡನೆ

Madhyama Bimba

ರಂಗನಪಲ್ಕೆಯ ಡಾ|ಬಿ.ಆರ್.ಅಂಬೇಡ್ಕರ್ ರಸ್ತೆ ಡಾಮಾರೀಕರಣ ಮಾಡಿದ ಕಾಂಗ್ರೆಸ್ ಸರಕಾರಕ್ಕೆ ಅಭಿನಂದನೆ: ಅಂತೋನಿ ಮಿರಾಂದಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More