ಕಾರ್ಕಳ

ಕಾರ್ಕಳ: ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ- ಗಾಯ

ಕಾರ್ಕಳ: ನಿಟ್ಟೆ ಗ್ರಾಮದ ದೂಪದಕಟ್ಟೆ ಬಳಿ ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರರು ಗಾಯಗೊಂಡ ಘಟನೆ ಫೆ. 05ರಂದು ವರದಿಯಾಗಿದೆ.


ಮೋಟಾರ್ ಸೈಕಲ್ ಸವಾರರಾದ ಹರೀಶ ಹಾಗೂ ಸಹಸವಾರ ರುದ್ರೇಶ ಗಾಯಗೊಂಡವರು.

ಅತ್ತೂರು ಚರ್ಚ್ ಕಡೆಯಿಂದ ದೂಪದಕಟ್ಟೆ ಜಂಕ್ಷನ್ ಕಡೆಗೆ ಅತೀವೇಗದಿಂದ ಹೋಗುತ್ತಿದ್ದ ಮೋಟಾರ್ ಸೈಕಲ್ ದೂಪದಕಟ್ಟೆ ಕಡೆಯಿಂದ ಅತ್ತೂರು ಚರ್ಚ್ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.


ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಮೋಟಾರ್ ಸೈಕಲ್ ಸವಾರರು ಗಾಯಗೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಕ್ರೈಸ್ಟ್‌ಕಿಂಗ್: ತಂಬಾಕು ಸೇವನೆಯ ದುಷ್ಪರಿಣಾಮಗಳ ಮಾಹಿತಿ ಕಾರ್ಯಕ್ರಮ

Madhyama Bimba

ಕಾರ್ಕಳ: ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

Madhyama Bimba

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More