ಕಾರ್ಕಳ

ಬೆಂಗಳೂರಿನ ಶಿಶಿರೋತ್ಸವ ಕ್ರೀಡಾಕೂಟದಲ್ಲಿ ಶ್ರೀ ರವಿಶಂಕರ ವಿದ್ಯಾಮಂದಿರ ವಿದ್ಯಾರ್ಥಿಗಳಿಗೆ 17 ಪದಕ

ಕಾರ್ಕಳ : ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ನಡೆಸಲಾಗುವ ವಿಶೇಷ ಶಿಶಿರೋತ್ಸವ ಕ್ರೀಡಾಕೂಟವು ಡಿ. 20 ರಿಂದ 23ರವರೆಗೆ ನಡೆಯಿತು. ಈ ರಾಷ್ಟ್ರೀಯ ಕ್ರೀಡೋತ್ಸವದಲ್ಲಿ ಕಾರ್ಕಳ ರವಿಶಂಕರ ವಿದ್ಯಾಮಂದಿರದ ಮಕ್ಕಳು ಭಾಗವಹಿಸಿ ವಿವಿಧ ವಿಭಾಗದಲ್ಲಿ ಸುಮಾರು 17 ಪದಕಗಳನ್ನು ಗಳಿಸಿದ್ದಾರೆ.


14 ವರುಷದ ಒಳಗಿನ ಬಾಲಕಿಯರ ವಿಭಾಗದ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಗ್ರಂಥ ಎಸ್. ದೇವಾಡಿಗ ತೃತೀಯ ಸ್ಥಾನವನ್ನು ಪಡೆದಿದ್ದು, 17 ವರುಷದ ಒಳಗಿನ ಬಾಲಕಿಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ 9 ನೇ ತರಗತಿ ವಿದ್ಯಾರ್ಥಿನಿ ಸುಜನ್ಯ ಕುಲಾಲ್ ದ್ವಿತೀಯ ಸ್ಥಾನವನ್ನು ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. 17 ವರ್ಷದ ಒಳಗಿನ ಬಾಲಕಿಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಪ್ರಗ್ಯ ಪುತ್ರನ್ ತೃತೀಯ ಸ್ಥಾನವನ್ನು ಪಡೆದಿರುತ್ತಾಳೆ. 17 ವರ್ಷದ ಒಳಗಿನ ಚೆಸ್ ಸ್ಪರ್ಧೆಯಲ್ಲಿ ಬಾಲಕರ ತಂಡವು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 17 ವರುಷದ ಒಳಗಿನ ಬಾಲಕಿಯರ ವಾಲಿಬಾಲ್ ಸ್ಪರ್ಧೆಯಲ್ಲಿ ಕಾರ್ಕಳ ವಿದ್ಯಾಮಂದಿರದ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Related posts

ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ

Madhyama Bimba

ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ ಕಾರ್ಕಳ- ಇದರ ಅಮೃತ ಮಹೋತ್ಸವ ಸಂಭ್ರಮ ಮತ್ತು ನೂತನ ಕಟ್ಟಡ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Madhyama Bimba

ಬಚ್ಚಪ್ಪು ಮೇಲ್ಜಡ್ಡು ಕ್ಷೇತ್ರದಲ್ಲಿ ಚಂಡಿಕಾಯಾಗ, ನೇಮೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More