ಕಾರ್ಕಳ

ನಾಳೆ (ಫೆ.08) ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ, ಸಾಮೂಹಿಕ ಬ್ರಹ್ಮೋಪದೇಶ

ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ ಹಾಗೂ ಸಾಮೂಹಿಕ ಬ್ರಹ್ಮೋಪದೇಶವು ನಾಳೆ (ಫೆ.08) ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯಲಿದೆ.

ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು, ಪೀಠಾಧೀಶ್ವರರು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ-ಪಡುಕುತ್ಯಾರು ಇವರ ದಿವ್ಯ ಉಪಸ್ಥಿತಿಯಲ್ಲಿ ರಜತ ಸಂಭ್ರಮ ಹಾಗೂ ವಿಶ್ವಕರ್ಮ ಸಮಾಜದ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ನಡೆಯಲಿದೆ.


2025ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಾಮೋದರ ಆಚಾರ್ಯ ಬೈಲೂರು (ಲೋಹ ಶಿಲ್ಪ), ಶ್ಯಾಮರಾಯ ಆಚಾರ್ಯ ಜಾರ್ಕಳ ಬೈಲೂರು (ಸ್ವರ್ಣ ಶಿಲ್ಪ), ಪದ್ಮನಾಭ ಆಚಾರ್ಯ ಸಾಣೂರು (ಕಾಷ್ಠ ಶಿಲ್ಪ), ಪ್ರಕಾಶ ಆಚಾರ್ಯ ಕುಕ್ಕುಂದೂರು (ಶಿಲಾ ಶಿಲ್ಪ), ಪ್ರಕಾಶ ಆಚಾರ್ಯ ಆನೆಕೆರೆ (ಎರಕ ಶಿಲ್ಪ), ಸೂರ್ಯ ಪುರೋಹಿತ್ ಕಾರ್ಕಳ (ರಂಗೋಲಿ ಕಲಾವಿದ), ಸುರೇಂದ್ರ ಆಚಾರ್ಯ ನೂರಾಳ್‌ಬೆಟ್ಟು (ಗಿನ್ನೆಸ್ ವಿಶ್ವದಾಖಲೆ ಪಡೆದ ಪೆನ್ಸಿಲ್ ಲೆಡ್ ಸೂಕ್ಷ್ಮ ಕಲಾವಿದ), ಪದ್ಮನಾಭ ಆಚಾರ್ಯ ಪೆರ್ವಾಜೆ (ಸಮಾಜಸೇವೆ), ಅನುಶ್ರೀ ರಿಷಬ್ ಆಚಾರ್ಯ ನಿಟ್ಟೆ, ಕು| ಲಾವಣ್ಯ ಯು.ಕೆ. ಕುಕ್ಕುಂದೂರು (ಸಿಎ ಅಂತಿಮ ಪರೀಕ್ಷೆ ತೇರ್ಗಡೆ) ಇವರಿಗೆ ಗೌರವಾರ್ಪಣೆ ನಡೆಯಲಿದೆ.

ಮಧ್ಯಾಹ್ನ 2.30ರಿಂದ ವೈವಿಧ್ಯಮಯ ಕಾರ್ಯಕ್ರಮ, ಸಂಜೆ 6.00ಗಂಟೆಗೆ ಬ್ರಾಹ್ಮಿ ಯಕ್ಷಕಲಾವೃಂದ ಹೆನ್ನಾಬೈಲ್ ಕುಂದಾಪುರ ಹಾಗೂ ದಕ್ಷಿಣೋತ್ತರ ಜಿಲ್ಲೆಯ ಅತಿಥಿ ಕಲಾವಿದರಿಂದ ‘ರಾಜಾ ರುದ್ರಕೋಪ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

 

 

Related posts

ಅತ್ಯುತ್ತಮ ವಿಮರ್ಶಕರಾಗಿ ನಿಟ್ಟೆ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕರನ್ನು ಗುರುತಿಸಿದ ಎ.ಎಸ್.ಸಿ.ಇ

Madhyama Bimba

ಅಜೆಕಾರು: ನೇಮೊಟ್ಟು ದಿ| ಸಂಪಾವತಿ ಶೆಡ್ತಿಯವರ ಸ್ಮರಣಾರ್ಥ ಬಸ್ಸುತಂಗುದಾಣ ಉದ್ಘಾಟನೆ

Madhyama Bimba

ಕ್ರೈಸ್ಟ್‌ಕಿಂಗ್: ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಆರಂಭೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More