ಕಾರ್ಕಳ

ಅತ್ಯುತ್ತಮ ವಿಮರ್ಶಕರಾಗಿ ನಿಟ್ಟೆ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕರನ್ನು ಗುರುತಿಸಿದ ಎ.ಎಸ್.ಸಿ.ಇ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ರಂಜಿತ್ ಅಂತರರಾಷ್ಟ್ರೀಯ ವಿದ್ವಾಂಸ ನಿಯತಕಾಲಿಕಗಳಿಗೆ ಅಮೂಲ್ಯವಾದ ಪೀರ್-ರಿವ್ಯೂ ನೀಡುತ್ತಾ ಬಂದಿದ್ದು, ಈ ಕೊಡುಗೆಗಳನ್ನು ಗುರುತಿಸಿ ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ ನಿಂದ 2025-26ನೇ ಸಾಲಿನ “ಅತ್ಯುತ್ತಮ ವಿಮರ್ಶಕ” ಎಂಬ ಗೌರವ ದೊರೆತಿದೆ.

ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಸಂಸ್ಥೆಗಳಲ್ಲಿ ಒಂದಾದ ಎ.ಎಸ್.ಸಿ.ಇ.ಯ ಮಾನ್ಯತೆಯು ಡಾ. ರಂಜಿತ್ ಅವರ ಅಂತರರಾಷ್ಟ್ರೀಯ ಮಟ್ಟದ ವಿದ್ವತ್ಪೂರ್ಣ ಪರಿಶೀಲನಾ ಚಟುವಟಿಕೆಗಳಿಗೆ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.

Related posts

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 06.00 ಕೋಟಿ ರೂಪಾಯಿ ಅನುದಾನ ಮಂಜೂರು: ವಿ ಸುನಿಲ್ ಕುಮಾರ್

Madhyama Bimba

ಕಡ್ತಲ ಶಾಲೆಯಲ್ಲಿ ಬ್ಯಾಗ್ ಹಾಗೂ ಶಾಲಾ ಪರಿಕರಗಳ ವಿತರಣೆ

Madhyama Bimba

ಏ. 16: ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More