ಕಾರ್ಕಳ

ಸಚ್ಚೇರಿಪೇಟೆಯಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ

ಹಿಂದೂ ಸಮಾಜದ ಭದ್ರ ಬುನಾದಿ ಎಂದರೆ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಮತ್ತು ಕೂಡು ಕುಟುಂಬ ಅತ್ಯಂತ ಪ್ರಾಮುಖ್ಯವಾಗಿದೆ. ಎಂದು ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.


ಅವರು ಸಚ್ಚೇರಿಪೇಟೆಯ ಶ್ರೀ ಮಹಮ್ಮಾಯೀ ಅಮ್ಮನವರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸೇವಾ ಟ್ರಸ್ಟ್ (ರಿ.) ಸಚ್ಚೇರಿಪೇಟೆ ಹಾಗೂ ಹಿಂದು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ೨೨ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಮಹೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಇಂದಿನ ಕಾಲದಲ್ಲಿದ್ದ ಕೂಡು ಕುಟುಂಬ ಹಾಗೂ ಗುರುಕುಲ ಮಾದರಿಯ ಶಿಕ್ಷಣ ಸಂಪೂರ್ಣ ನಶಿಸಿಹೋಗಿದೆ. ಕೂಡು ಕುಟುಂಬ ಸಮಾಜದ ಬಹುಮುಖ್ಯ ಅಂಗವಾಗಿದ್ದು ಇದರಿಂದ ಸದಸ್ಯರೆಲ್ಲ ಪರಸ್ಪರ ಬೆರತು ಸಾಮಾಜಿಕವಾಗಿ ಸಮರ್ಥರಾಗುತ್ತಿದ್ದರು .ಆದರೆ ಇಂದು ಅಣ್ಣ-ತಮ್ಮಂದಿರು, ಗಂಡ ಹೆಂಡತಿ ಒಟ್ಟಿಗೆ ಇರದ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದರು.

ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೊಡೆತ್ತೂರು ಶ್ರೀ ಭುವನಾಭಿರಾಮ ಉಡುಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಶಾಂತ್ ಕಾಮತ್ ಕಾರ್ಕಳ, ಎಂ ಆರ್ ಪಿ ಎಲ್ ಓ ಎಂ ಜಿ ಸಿ ಕರ್ಮಾಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಎನ್ ಅಂಚನ್, ಉದ್ಯಮಿ ಬೋಜ ಸುವರ್ಣ, ಸೂರತ್ ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚ್ಚೇರಿಪೇಟೆ, ಉದ್ಯಮಿ ಭಾಸ್ಕರ್ ಶೆಟ್ಟಿ ಸಂಕಲಕರಿಯ ಜಿತೇಂದ್ರ ಪೇರೂರು ಉಪಸ್ಥಿತರಿದ್ದರು.
ಟ್ರಸ್ಟಿನ ಅಧ್ಯಕ್ಷ ಹರೀಶ್ ಸಚರಿಪೇಟೆ ಸ್ವಾಗತಿಸಿ ಧನ್ಯವಾದವಿತ್ತರು. ಶಿಕ್ಷಕ ಸುಧೀರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಭಿನಯ ಕಲಾವಿದರು ಉಡುಪಿ ಇವರಿಂದ “ಚಿಟ್ಟೆ” ಎಂಬ ಹಾಸ್ಯಮಯ ನಾಟಕ ನಡೆಯಿತು.

Related posts

ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ಅಧ್ಯಕ್ಷರಾಗಿ ಸುನೀತ ಹೆಬ್ಬಾರ್ ಆಯ್ಕೆ

Madhyama Bimba

ಪ್ರಗತಿಬಂಧು ಸ್ವ ಸಹಾಯ ಸಂಘಗಳಿಗೆ ನೂತನ 700 ಸದಸ್ಯರ ಸೇರ್ಪಡೆ ಕಾರ್ಯಕ್ರಮ

Madhyama Bimba

ವಸತಿ ಶಾಲೆಯ 6 ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More