Blog

ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಭಾನು ಭಾಸ್ಕರ ಪೂಜಾರಿ

ಕಾರ್ಕಳ ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಭಾನು ಭಾಸ್ಕರ್ ಪೂಜಾರಿ ಆಯ್ಕೆ ಆಗಿದ್ದಾರೆ.

ನಿನ್ನೆ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯ ಶೆಟ್ಟಿಯವರು ಈ ಆಯ್ಕೆ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಪ್ರಬಲ ಮಾಡುವ ಅವರ ಚಿಂತನೆಗೆ ಪೂರಕವಾಗಿ ಈ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಆಗಿರುವ  ಹಾಗೂ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಆಗಿರುವ ಇವರು ಮೈತ್ರಿ ಮಹಿಳಾ ಮಂಡಲ ಮಾಜಿ ಅಧ್ಯಕ್ಷರಾಗಿ ಎ ಪಿ ಎಂ ಸಿ ಯ ಮಾಜಿ ನಾಮ ನಿರ್ದೇಶಕರಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಆಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ನಿವೃತ್ತ ಸೈನಿಕ ಭಾಸ್ಕರ್ ರವರ ಪತ್ನಿ ಆಗಿದ್ದಾರೆ

Related posts

ಸತ್ಯ ನಾರಾಯಣ ಹೆಬ್ಬಾರ್ ನಿಧನ

Madhyama Bimba

ಮುನಿಯಾಲು ಬಂಟರ ಸಂಘದ ಕಾರ್ಯಕ್ರಮ

Madhyama Bimba

ಇನ್ನಾ ಗ್ರಾಮ ಪಂಚಾಯತ್ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More