ಮೂಡುಬಿದಿರೆ

ವಾಲ್ಪಾಡಿ ಪಂಚಾಯತ್ ಅರಿವು ಕೇಂದ್ರ ಉದ್ಘಾಟನೆ

ವಾಲ್ಪಾಡಿ ಗ್ರಾಮ ಪಂಚಾಯತ ಕಚೇರಿಯ ಮುಂಭಾಗದಲ್ಲಿ ನಿರ್ಮಿಸಲಾದ ಅರಿವು ಕೇಂದ್ರ ಗ್ರಂಥಾಲಯವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.


ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಾಮಾನ್ಯ ಜ್ಞಾನ ವೃದ್ಧಿಸಲು ಗ್ರಂಥಾಲಯ ಅವಶ್ಯವಿದ್ದು, ಅರಿವು ಕೇಂದ್ರ ಮೂಲಕ ಜನರಿಗೆ ಜ್ಞಾನಾರ್ಜನೆಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು. ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ತಮ್ಮನ್ನು ಜನರು ಕರೆದು ಗುರುತಿಸುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸಲಹೆಯಿತ್ತರು.

ವಾಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಶಾಲಾಕ್ಷಿ, ಉಪಾಧ್ಯಕ್ಷ ಗಣೇಶ್ ಪಿ. ಅಳಿಯೂರು, ಪಂಚಾಯತದಲ್ಲಿ ಅವಿರತ ಕೆಲಸ ಮಾಡುತ್ತಿರುವ ಕಾರ್ಯದರ್ಶಿ ಶೇಖರ್, ಪೆರಿಬೆಟ್ಟು ಶಾಲಾ ವಿಶ್ರಾಂತ ಮುಖ್ಯೋಪಾಧ್ಯಾಯ ರಾಜೇಂದ್ರ ಕುಮಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ ಅವರನ್ನು ಶಾಲು ಹೊದಿಸಿ ಫಲವಸ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ, ತಾಲೂಕು ಪಂಚಾಯತ್ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಸಾಯಿಶ್ ಚೌಟ, ಪಂಚಾಯತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಸದಸ್ಯರಾದ ಭವಾನಿ, ಶ್ರೀಧರ್ ಬಂಗೇರ, ಯಶೋಧ, ಅಭಿವೃದ್ಧಿ ಅಧಿಕಾರಿ ಜಲಜ, ದರಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಮಾಜಿ ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಮಾಜಿ ಅಧ್ಯಕ್ಷರಾದ ಜಯಂತ್ ಹೆಗ್ಡೆ, ಲತಾ ಹೆಗ್ಡೆ , ಉದಯ್, ಲಕ್ಷ್ಮಣ ಸುವರ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅರಿವು ಕೇಂದ್ರದ ನಿರ್ಮಾಣಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು 14.50 ಲಕ್ಷ ರೂ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ 3.50 ಲಕ್ಷ ರೂ ಅನುದಾನ ನೀಡಿದ್ದಾರೆ.

Related posts

ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Madhyama Bimba

  ಪಡುಮಾರ್ನಾಡು ಅಭಿನಂದನ ಸಮಾರಂಭ

Madhyama Bimba

ಮೂಡುಬಿದಿರೆ ಯುವತಿ ಗುರುಪುರದಲ್ಲಿ ಆತ್ಮಹತ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More