ವರದಿ :
ನಾಗೇಶ್ ಎಂ ಎಚ್ ಮಾಗೇರಿ
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬ ಕುವೆಂಪು ಅವರ ಮಾತಿಗೆ ಅರ್ಥವಿದೆ. ಸಿಮೆಂಟ್ ಮಂಜು
ಸಕಲೇಶಪುರ: ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂಬ ಕುವೆಂಪು ಅವರ ಮಾತಿಗೆ ತುಂಬಾ ಅಥ೯ವಿದೆ. ನಾಯಕತ್ವಕ್ಕೆ ತುಂಬಾ ಮಹತ್ವ ನೀಡುವ ವಾಕ್ಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸಕಲೇಶಪುರ ಸರ್ಕಾರಿ ನೌಕರರ ಸಂಘದ ಸಭಾಂಗಣ ಉದ್ಗಾಟನೆ ಮಾಡಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೆ 5 ಲಕ್ಷ ಅನುದಾನ ಶಾಸಕರ ನಿಧಿಯಿಂದ ಕೊಟ್ಟಿದ್ದೀನಿ ನಾನೂ ಸರ್ಕಾರಿ ನೌಕರನ ಮಗ ಆಗಿದ್ದರಿಂದ ಚಿಕ್ಕ ಹುಡುಗನಿಂದ ಈ ಬಿಲ್ಡಿಂಗ್ ನೋಡಿದ್ದೇನೆ. ಅಧಿಕಾರ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಸಿಕ್ಕ ಅಧಿಕಾರ ಶ್ರದ್ದೆಯಿಂದ ಆತ್ಮ ಶಾಕ್ಷಿಯಿಂದ ಮನಸ್ಸಿಗೆ ಒಪ್ಪುವ ರೀತಿ ತಮ್ಮ ಅವಧಿಯಲ್ಲಿ ಏನಾದರೂ ಮಾಡಿ ಸಾರ್ಥಕ ಮಾಡಬೇಕು ಈಗ 5 ಲಕ್ಷ ಕೊಡುವುದಾಗಿ ಮೊದಲೇ ಹೇಳಿದ್ದೆ ಈಗ ಮತ್ತೆ ಎರೆಡೂವರೆ ಲಕ್ಷ ಕೊಡುತ್ತೇನೆ ಏಳುವರೆ ಲಕ್ಷ ಆಗುತ್ತದೆ.ನೌಕರರ ಸಂಘದ ಬಿಲ್ಡಿಂಗ್ ಸುಸರ್ಜಿತವಾಗಿ ಮಾಡಿ ಎಂದರು.
ನಂತರ ಮುಖ್ಯಾಧಿಕಾರಿ ಮಹೇಶ್ವರಪ್ಪ ಅವರಿಗೆ ಸರ್ಕಾರಿ ನೌಕರರ ಸಂಘದ ಬಿಲ್ಡಿಂಗ್ ಗೆ ಲೈಸನ್ಸ್ ಕೊಡಿ ಪಟ್ಟಣ ಸುಂದರವಾಗಿ ಕಾಣಲಿ ಎಂದು ಹೇಳಿದರು. ಸರ್ಕಾರಿ ನೌಕರರ ಕಟ್ಟಡದಲ್ಲಿ ಬಾಡಿಗೆ ಇರುವವರನ್ನು ಸನ್ಮಾನಿಸಿದರು. ಸೌಕರರ ಸಂಘದ ಅಧ್ಯಕ್ಷ ತಮ್ಮಣ್ಣ ಶೆಟ್ಟಿ ಶಾಸಕರ ಕೆಲಸಗಳನ್ನು ಹೊಗಳಿದರು. ನೌಕರರ ಸಂಘದ ಜಿಲ್ಲಾದ್ಯಕ್ಷ ಕೃಷ್ಣೇಗೌಡ. ಜಿಲ್ಲಾ ಉಪಾದ್ಯಕ್ಷ ಹೇಮಂತ್ ಲಕ್ಷ್ಮಿಕಾಂತ್ . ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚೈತ್ರನಾಯಕರ ಹಳ್ಳಿ. ಮುಖ್ಯಾಧಿಕಾರ ಮಹೇಶ್ವರಪ್ಪ. . ಪಿಡಿಓ ಶಾಂತ. ಹಲವುಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

