ಕಾರ್ಕಳಹೆಬ್ರಿ

ಹೆಬ್ರಿಯಲ್ಲಿ ಸಮಾಲೋಚನಾ ಸಭೆ

ಹೆಬ್ರಿ : ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿ ಫೆ.19-21 ರ ವರೆಗೆ ನಡೆಯಲಿರುವ ಶ್ರೀಮನ್ನಾಗಮಂಡಲ ಅತ್ಯಪೂರ್ವ ಧಾರ್ಮಿಕ ಪವಿತ್ರ ಹಾಗೂ ಪುಣ್ಯಕಾರ್ಯಕ್ರಮದಲ್ಲಿ ಸಕುಟುಂಬಿಗಳಾಗಿ ಭಗವದ್ಭಕ್ತರು ಆಗಮಿಸುವಂತೆ ಶ್ರೀಮನ್ನಾಗಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಆರ್. ದಾಮೋದರ ಶರ್ಮಾ ಬಾರ್ಕೂರು ವಿನಂತಿಸಿಕೊಂಡರು.

ಹೆಬ್ರಿಯ ಧಾರ್ಮಿಕ ಮುಖಂಡ ಭಾಸ್ಕರ ಜೋಯಿಸ್ ಶುಭಾಶಂಸನೆಗೈದರು. ಸರ್ವರಿಗೂ ಆಮಂತ್ರಣ ಪತ್ರಿಕೆ ವಿತರಿಸಲಾಯಿತು.

ಹೆಚ್ ಭಾಸ್ಕರ ಜೋಯಿಸ್ ಹೆಬ್ರಿ, ಹೆಬ್ರಿಯ ಟಿ.ಜಿ. ಆಚಾರ್ಯ ಹೆಬ್ರಿ. ಮುನಿಯಾಲು ಗೋಧಾಮದ ರಕ್ಷತ್ ಆರ್. ಆಚಾರ್, ಹೆಬ್ರಿ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷ ಹೆಚ್.ಕೆ. ಸುಧಾಕರ್, ರವೀಂದ್ರ ಪುರೋಹಿತ್ ಹೆಬ್ರಿ, ದಿನೇಶ ಶೆಟ್ಟಿ, ಶ್ರೀ ರಾಮ ಮಂಟಪ ಹೆಬ್ರಿಯ ಅಧ್ಯಕ್ಷ ನರೇಂದ್ರ ನಾಯಕ್, ಹೆಬ್ರಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೇಶವ ಆಚಾರ್ಯ ಮತ್ತು ಪೂರ್ವಾಧ್ಯಕ್ಷರುಗಳು, ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು, ಹೆಬ್ರಿ ವಿಶ್ವಕರ್ಮ ಯುವವೃಂದದ ಪದಾಧಿಕಾರಿಗಳು, ಶ್ರೀ ರಾಮ ಭಜನಾ ಮಂಡಳಿ ಸೀತಾನದಿಯ ಪದಾಧಿಕಾರಿಗಳು, ಹೆಬ್ರಿ ಹಿಂದೂ ಸಂಘಟನೆಯ ಪದಾಧಿಕಾರಿಗಳು, ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷರು, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರು, ಹೆಬ್ರಿ ಗ್ರಾಮ ಪಂಚಾಯಿತಿ ಪೂರ್ವಾಧ್ಯಕ್ಷರುಗಳು, ಹೆಬ್ರಿಯ ಗಣ್ಯರು, ಶಿವಪುರದ ಉದ್ಯಮಿಗಳು, ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಹೆಬ್ರಿ ಟಿ.ಜಿ. ಆಚಾರ್ಯ ಸ್ವಾಗತಿಸಿ ವಂದಿಸಿದರು.

Related posts

ಕಾರ್ಕಳ ಜ್ಞಾನಸುಧಾ : ವಿಶ್ವಯೋಗ ದಿನಾಚರಣೆ

Madhyama Bimba

ಮೇ 15 ರಂದು ನೇರ ಸಂದರ್ಶನ

Madhyama Bimba

ಕಾರ್ಕಳದ ನೂತನ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಶಾಸಕರ ಗೈರು: ಬೇಸರ ವ್ಯಕ್ತಪಡಿಸಿದ ದಲಿತ ಮುಖಂಡರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More