ಕಾರ್ಕಳಹೆಬ್ರಿ

“ಉದ್ಯೋಗ ಖಾತ್ರಿ” ಯೋಜನೆಗೆ ಕೇಂದ್ರ ಸರ್ಕಾರದ ನಿಯಂತ್ರಣ – ಬಡವರಿಗೆ ಅನ್ಯಾಯ : ನೀರೆ ಕೃಷ್ಣ ಶೆಟ್ಟಿ

ಹೆಬ್ರಿ : 2005 ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರಕಾರವು ಅಂದಿನ ಪ್ರಧಾನಿ ಮನ್‌ಮೋಹನ್ ಸಿಂಗ್ ಭಾರತ ರಾಷ್ಟ್ರದಲ್ಲಿ ಉದ್ಯೋಗ ಖಾತ್ರಿಯನ್ನು ಜಾರಿಗೆ ತಂದು, ನಿರುದ್ಯೋಗಿ, ಕೂಲಿ ಕಾರ್ಮಿಕರಿಗೆ ದೇಶಾದ್ಯಂತ ನೆರವಾದರು ಆದರೆ ಈಗ ಬಿಜೆಪಿಯ ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆಗೆ ಹಲವು ನಿಯಂತ್ರಣ ತಂದು ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೆಪಿಸಿಸಿ ಸದಸ್ಯರಾದ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮನರೇಗ “ಉದ್ಯೋಗ ಖಾತ್ರಿ” ಯೋಜನೆ ಕಳೆದ 20 ವರ್ಷದಿಂದ ಜಾರಿಯಲ್ಲಿದ್ದು ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಭಾರತ ದೇಶದಲ್ಲಿ, ಜಾರಿಗೊಂಡ ಈ ಯೋಜನೆಗೆ ವಿಶ್ವಾದ್ಯಾಂತ ಅತೀ ಹೆಚ್ಚು ಪ್ರಶಂಸೆ ಪಡೆಯಿತು. ಯೋಜನೆಯಿಂದ ದೇಶಾದ್ಯಾಂತ ಪ್ರತಿ ಗ್ರಾಮ ಪಂಚಾಯತಿಗೆ 1 ಕೋಟಿ ಹಣ ಖರ್ಚು ಮಾಡುವ ಅವಕಾಶ ಇತ್ತು. ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಗೆ ವಾರ್ಷಿಕವಾಗಿ ಯೋಜನೆಯಲ್ಲಿ 6 ಸಾವಿರ ಕೋಟಿ ರೂಪಾಯಿ ವಿನಿಯೋಗವಾಗುತ್ತಿತ್ತು. ಇದರಿಂದ ದೇಶಾದ್ಯಾಂತ ಬಡವರ ತಲಾ ವರಮಾನ ಹೆಚ್ಚಲು ಪ್ರಮುಖ ಕಾರಣವಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರವು ಹಲವು ನಿಯಂತ್ರಣವನ್ನು ಹೇರುವ ಮೂಲಕ ಅನ್ಯಾಯ ಮಾಡುತ್ತಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದ್ದಾರೆ.

ಮಹತ್ವಕಾಂಕ್ಷೆಯ ಉದ್ಯೋಗಖಾತ್ರಿ ಯೋಜನೆಯನ್ನು ಈಗ ಬದಲಿಸಿ 2025 ರ ವಿ.ಜಿ. ರಾಮ್ ಜಿ – ವಿಕಸಿತ ಭಾರತ ಉದ್ಯೋಗ ಖಾತರಿ ಅಭಿಯಾನ ಎಂದು ಮಾಡಿ 100 ದಿನದ ಕೂಲಿಯನ್ನು 125 ದಿನಕ್ಕೆ ಹೆಚ್ಚಿಸಿದ್ದಾರೆ, ಆದರೆ ಈ ಮೊತ್ತದಲ್ಲಿ ಶೇಕಡಾ 40% ರಾಜ್ಯ ಸರ್ಕಾರ ಪಾಲು ನೀಡಬೇಕಾಗಿದ್ದು, ಪಾಲು ನೀಡಿದಲ್ಲಿ ಮಾತ್ರ  ಉಳಿದ 60% ಶೇಕಡಾ ಮಂಜೂರಾತಿ ಕೇಂದ್ರ ಸರ್ಕಾರ ನೀಡುವುದಾಗಿ ಹೇಳಿರುವುದು ಅತ್ಯಂತ ಅನ್ಯಾಯವಾಗಿದೆ.

ಅದು ಅಲ್ಲದೆ ರಾಜ್ಯ ಸರ್ಕಾರ 40% ಶೇಕಡ ನೀಡಿದರೂ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಟ್ಟದ ಮಾರ್ಗದರ್ಶನ ಸಮಿತಿ ಮಂಜೂರು ಮಾಡಿದರೆ ಮಾತ್ರ ರಾಜ್ಯಕ್ಕೆ ಯೋಜನೆಯ ಹಣ ಲಭಿಸಲಿದೆ.

ಇದರಿಂದ ಗಾಂಧೀಜಿ ಕಲ್ಪನೆಯ ಗ್ರಾಮ ಸ್ವರಾಜ್ ವ್ಯವಸ್ಥೆಗೆ ರಾಮರಾಜ್ಯ ಆಧಾರಿತ, ಪಂಚಾಯತ್ ರಾಜ್ ಆಡಳಿತಕ್ಕೆ ದಕ್ಕೆ ತಂದಿದೆ. ಮತ್ತೇ ಕೇಂದ್ರೀಕರಣ ಆಡಳಿತಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಮನ ಮೋಹನ್ ಸಿಂಗ್ ಸರ್ಕಾರ, ಜಿಲ್ಲೆ, ತಾಲ್ಲೂಕು, ಮತ್ತು ಗ್ರಾಮ ಪಂಚಾಯತಿ ವ್ಯವಸ್ಥೆಗೆ ಸಂಪೂರ್ಣ ಅನುಷ್ಠಾನ ಜವಾಬ್ದಾರಿ ನೀಡಿ ಉದ್ಯೋಗ ಖಾತ್ರಿ ದೇಶಾದ್ಯಾಂತ ಜಾರಿಗೆ ತಂದು ಮತ್ತು ಸಫಲಗೊಳಿಸಿತ್ತು. ಕೇಂದ್ರ ಸರ್ಕಾರ ಈ ಹಿಂದಿನ ಯೋಜನೆಯನ್ನೇ ಮರು ಜಾರಿಗೊಳಿಸುವಂತೆ ನೀರೆ ಕೃಷ್ಣ ಶೆಟ್ಟಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

Related posts

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಮೋಟಾರ್ ಸೈಕಲ್ ಡಿಕ್ಕಿ

Madhyama Bimba

ಬೆಂಗಳೂರಿನ ಶಿಶಿರೋತ್ಸವ ಕ್ರೀಡಾಕೂಟದಲ್ಲಿ ಶ್ರೀ ರವಿಶಂಕರ ವಿದ್ಯಾಮಂದಿರ ವಿದ್ಯಾರ್ಥಿಗಳಿಗೆ 17 ಪದಕ

Madhyama Bimba

ಪಂಚಾಯತ್ ನೌಕಕರ ಮುಷ್ಕರ: ಜನಸೇವೆಯಲ್ಲಿ ವ್ಯತ್ಯಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More