ಮೂಡುಬಿದಿರೆ

ಮೂಡುಬಿದಿರೆ ಮೊಬೈಲ್ ರಿಟೈಲರ್ಸ್ ಕ್ರಿಕೆಟ್-ಅಲ್ ಝೈನ್ ಪ್ರಥಮ: ಅಶ್ರಫ್ ವಾಲ್ಪಾಡಿ ಸನ್ಮಾನ

ಮೂಡುಬಿದಿರೆ: ಮೂಡುಬಿದಿರೆ ವಲಯ ಮೊಬೈಲ್ ರಿಟೈಲರ್ಸ್ ವತಿಯಿಂದ ಆಯೋಜಿಸಲಾದ ಮೂರನೇ ಆವೃತ್ತಿಯ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಸಮಾರೋಪ ಸಮಾರಂಭದಲ್ಲಿ ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಿಶಾ ಪಿ. ಪೂಜಾರಿ, ಡೆಲ್ಲಾ ಝೀನತ್, ಟೆಲ್ಮಾ ಫೆಮಿನಾ ಸಾಂತ್ಮಯೋರ್ ಹಾಗೂ ಪ್ರೇಮ್ ಪ್ರಶಾಂತ್ ಅವರನ್ನು ಸನ್ಮಾನಿಸಲಾಯಿತು.

ಸ್ರಾಜ್ಯ ಮೈದಾನದಲ್ಲಿ ನಡೆದ ಪಂದ್ಯಾಟವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಪುರಸಭೆಯ ಮಾಜಿ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಐದು ತಂಡಗಳ ನಡುವೆ ನಡೆದ ಲೀಗ್ ಸ್ಪರ್ಧೆಯಲ್ಲಿ ಫಾರೂಕ್ ಅವರ ನಾಯಕತ್ವದ ಅಲ್ ಝೈನ್ ಪ್ಯಾಂಥರ್ಸ್ ಪ್ರಥಮ ಸ್ಥಾನ ಪಡೆದರೆ, ಇರ್ಫಾನ್ ಬೆದ್ರ (ಬೆದ್ರ ಮೀಡಿಯಾ) ಅವರ ಸಾರಥ್ಯದ ಟೀಮ್ ಬೆದ್ರ ದ್ವಿತೀಯ ಸ್ಥಾನ ಗಳಿಸಿತು.

ವೈಯಕ್ತಿಕ ವಿಭಾಗದಲ್ಲಿ ಅರ್ಷದ್ ಶಿರ್ತಾಡಿ ಉತ್ತಮ ದಾಂಡಿಗ, ರೂಪೇಶ್ ಉತ್ತಮ ಎಸೆತಗಾರ, ಸುಹೈಲ್ ಪುತ್ತಿಗೆ ಸರಣಿಶ್ರೇಷ್ಠ ಹಾಗೂ ನೌಷಾದ್ ಕೆರೆಬಳಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್ ಶೆಣೈ, ಖಜಾಂಚಿ ರಾಘವೇಂದ್ರ ಪ್ರಭು, ಮೂಡುಬಿದಿರೆ ಅಸೋಸಿಯೇಷನ್ ಅಧ್ಯಕ್ಷ ಸಫ್ವಾನ್ ಹಮೀದ್ ಮತ್ತು ಕಾರ್ಯದರ್ಶಿ ಅವಿನಾಶ್ ಪೂಜಾರಿ, ಹನೀಫ್ ರೆಹ್ಮಾನಿಯ ಬಹುಮಾನ ವಿತರಿಸಿದರು. ಶಫೀಕ್, ಫಾರೂಕ್, ಶ್ರೀನಿತ್, ಲ್ಯಾನ್ಸಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಮದ್ ಕಾಟಿಪಳ್ಳ ಮತ್ತು ರಫೀಝ್ ಬೆದ್ರ ನಿರೂಪಿಸಿದರು.

Related posts

ಬಜಗೋಳಿಯಲ್ಲಿ ನೂತನ ಫ್ಲೆಕ್ಸ್ ಫ್ಯಾಕ್ಟರಿ ಘಟಕ ಪ್ರಾರಂಭ

Madhyama Bimba

ಕೌಶಲ ಜ್ಞಾನವಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ -ಸವಿತಾ

Madhyama Bimba

ಮೂಡುಬಿದಿರೆ ಅಪೂರ್ವ ಜುವೆಲ್ಲರ್ಸ್ಸ್ ದೀಪಾವಳಿ ಕೊಡುಗೆ- ಪ್ರತಿ ಗ್ರಾಂ ಚಿನ್ನಕ್ಕೆ 200ರೂ. ರಿಯಾಯಿತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More