ಕಾರ್ಕಳ

ಕಾರ್ಕಳ: ನಂದಳಿಕೆ ಹಲ್ಲೆ ಪ್ರಕರಣ – ದೂರು ಪ್ರತಿದೂರು ದಾಖಲು

ಕಾರ್ಕಳ: ವ್ಯಕ್ತಿಯೋರ್ವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಮಾಡಿದ ಘಟನೆ ಫೆ. 17ರಂದು ವರದಿಯಾಗಿದೆ.

ನಂದಳಿಕೆ ಗ್ರಾಮದ ಸುಧೀರ್ ಶೆಟ್ಟಿ (46) ಹಲ್ಲೆಗೊಳಗಾದವರು.

ಸುಧೀರ್‌ರವರು ಕಾರಿನಲ್ಲಿ ಮಂಜುರವರನ್ನು ನಂದಳಿಕೆಗೆ ಬಿಡಲು ಹೋಗುತ್ತಿರುವಾಗ ನಂದಳಿಕೆ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ಟಿಪ್ಪರ್‌ಗಳು ಹೋಗುತ್ತಿದ್ದು ಟಿಪ್ಪರ್‌ನ ಬದಿಯಲ್ಲಿ ಮುಂದೆ ಹೋಗಲು ಜಾಗ ಇರದ ಕಾರಣ ಕಾರು ರಸ್ತೆ ಬದಿಗೆ ಹೋಗಿದ್ದನ್ನು ನೋಡಿ ಟಿಪ್ಪರ್ ಚಾಲಕನು ಟಿಪ್ಪರ್ ನಿಲ್ಲಿಸಿದನು. ಆಗ ಸುಧೀರ್‌ರವರು ಟಿಪ್ಪರ್ ಚಾಲಕನಲ್ಲಿ ಸೈಡ್ ಕೊಡಲು ಆಗುವುದಿಲ್ಲವಾ ಎಂದು ಕೇಳಿದ್ದು, ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಆದರ್ಶ ಶೆಟ್ಟಿ ಮತ್ತು ಇತರ ಇಬ್ಬರು ಕಾರಿನಲ್ಲಿ ಬಂದು ಸುಧೀರ್‌ರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿ, ತಡೆಯಲು ಬಂದ ರಿತೇಶ ಶೆಟ್ಟಿಯವರಿಗೂ ಹಲ್ಲೆ ಮಾಡಿ, ನಂತರ 2 ಕಾರುಗಳಲ್ಲಿ 10 ಜನರನ್ನು ಕರೆಸಿ ಅಕ್ರಮ ಕೂಟ ಸೇರಿಕೊಂಡು ಪುನಃ ಸುಧೀರ್ ಶೆಟ್ಟಿ ಹಾಗೂ ರಿತೇಶ ಶೆಟ್ಟಿರವರಿಗೆ ಕೈಯಿಂದ ಹಲ್ಲೆ ನಡೆಸಿ, ತುಳಿದು ಜೀವಬೆದರಿಕೆ ಹಾಕಿದ್ದಾರೆ.

ಈ ಪ್ರಕರಣದಲ್ಲಿ ರಾಹುಲ್ ಟೆರೆನ್ಸ್ ಐಜುರವರು ಕ ಸುಧೀರ್ ಶೆಟ್ಟಿ ಮತ್ತು ರಿತೇಶ್ ಶೆಟ್ಟಿ ಮೇಲೆ ಪ್ರತಿದೂರು ದಾಖಲಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Related posts

ವಾಲ್ಪಾಡಿ: ಸ್ವಲಾತ್ ಕಮಿಟಿ ಅಧ್ಯಕ್ಷರಾಗಿ ಇರ್ಷಾದ್, ಕಾರ್ಯದರ್ಶಿಯಾಗಿ ರಿಯಾಝ್

Madhyama Bimba

ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಅಶ್ಮಿತಾ ಪ್ರಭು ದ್ವಿತೀಯ

Madhyama Bimba

ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ನೀರೆ ಬೈಲೂರು: ಭೋಜನ ಶಾಲೆಯ ಶಂಕುಸ್ಥಾಪನೆ, ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More