ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀರಾಮ ತಾರಕ ಜಪ ಯಜ್ಞ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ಎಸ್‌ಎಂಎಸ್‌ಪಿ ಸಂಸ್ಕೃತ ಕಾಲೇಜು ಉಡುಪಿಯ ಸಂಸ್ಕೃತ ಉಪನ್ಯಾಸಕರಾದ ಡಾ. ಅಜಿತ್ ಕುಮಾರ್ ರವರು ಉದ್ಘಾಟಿಸಿದರು. ಅವರು ತಮ್ಮ ಉಪನ್ಯಾಸದಲ್ಲಿ ರಾಮನು ಕೇವಲ ಮಂದಿರದಲ್ಲಿದ್ದರೆ ಸಾಲದು, ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಯಾಗಬೇಕು. ನಾವು ಮಾತನಾಡುವಾಗ ನಗುನಗುತ್ತಾ ಮಾತನಾಡಬೇಕು. ಇದು ರಾಮನಲ್ಲಿರುವ ಗುಣ. ಅವನು ಈ ಎಲ್ಲಾ ಗುಣಗಳಿಂದ ಪ್ರಸಿದ್ಧನಾಗಿದ್ದಾನೆ. ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣಗಳು ಇದ್ದೇ ಇರುತ್ತದೆ. ರಾಮ ದುಷ್ಟರ ನಿಗ್ರಹ ಶಿಷ್ಟರ ರಕ್ಷಣೆಯನ್ನು ಮಾಡಿ ಸಮಾಜದಲ್ಲಿದ್ದ ಕೆಟ್ಟ ಶಕ್ತಿಗಳನ್ನು ಕತ್ತರಿಸಿ, ಸಮಾಜಕ್ಕೆ ಒಳಿತನ್ನು ಮಾಡಿದ್ದಾನೆ. ರಾಮಾಯಣದಿಂದ ಕಲಿಯುವ ಪಾಠ ತುಂಬಾ ಇದೆ. ಭಗವದ್ಗೀತೆಯ ಶ್ರವಣದಿಂದ ಮನಸ್ಸು ಶುದ್ದವಾಗುತ್ತದೆ. ಎಲ್ಲರಲ್ಲಿಯೂ ರಾಮನ ಗುಣಗಳು ತುಂಬಿ ಬರಲಿ ಎಂದು ಹಾರೈಸಿದರು.
ಜೇಸಿ ಇಂಟರ್ನ್ಯಾಷನಲ್ ಶಾಲೆಯ ಸಂಸ್ಕೃತ ಶಿಕ್ಷಕರಾದ ಶಂಕರನಾರಾಯಣ ಭಟ್ ರವರು ಶ್ಲೋಕವನ್ನು ಹೇಳುವುದರ ಮೂಲಕ ರಾಮನ ಮಹತ್ವ ತಿಳಿಸಿದರು.
ಶಾಲಾ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿಯವರು ಇಂತಹ ಒಳ್ಳೆ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಖುಷಿಯನ್ನು ನೀಡುತ್ತದೆ ಎಂದರು.
ಭಾರತ ಸಂಸ್ಕೃತಿ ಪ್ರತಿಷ್ಠಾನ ಸಂಸ್ಥೆಯ ರಾಮಾಯಣ ಮಹಾಭಾರತ ಪರೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಮತ್ತು ಪ್ರಥಮ, ದ್ವಿತೀಯ ಸ್ಥಾನ ಗಳಿಸಿದವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಹರಿದಾಸ್ ಹೆಚ್ ಭಟ್, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಪ್ರಸನ್ನ ಭಟ್, ಜೆಸಿಐ ಕಾರ್ಕಳದ ನೂತನ ಅಧ್ಯಕ್ಷರಾದ ಜೇಸಿ ಅವಿನಾಶ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್, ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಪ್ರತಿಮಾ ಹಾಗೂ ಶ್ರೀಮತಿ ಶಾಲಿನಿ ಆರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ್ ನಿರೂಪಿಸಿದರು.
