ಕಾರ್ಕಳ

ಇನ್ನಾ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಸೌಕರ್ಯಗಳ ಅಭಿವೃದ್ಧಿಗಾಗಿ ಇನ್ನಾ ಗ್ರಾಮ ಪಂಚಾಯತ್ ರೂ 25ಲಕ್ಷ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.


ಇನ್ನಾ ಗ್ರಾಮ ಪಂಚಾಯತ್ ಕಛೇರಿ ಬಳಿ ಇನ್ನಾ ಗ್ರಾಮ ಪಂಚಾಯತ್ ಸ್ವಂತ ಸಂಪನ್ಮೂಲದಿಂದ ರೂ 1.40 ಲಕ್ಷ ವೆಚ್ಚದಲ್ಲಿ ನೂತನ ರಿಕ್ಷಾ ನಿಲ್ದಾಣಕ್ಕೆ ಮೇಲ್ಛಾವಣಿಯನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಯಿತು.

ಮತ್ತು ಹೊಸ ದಾರಿದೀಪ ಅನುಷ್ಠಾನ, ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಆದ್ಯತೆ ಇತರ ಕಾಮಗಾರಿಗಳನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.


ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸರಿತಾ ಶೆಟ್ಟಿ ನೂತನ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಲೋಕಾರ್ಪಣೆ ಗೈದರು.

ಉಪಾಧ್ಯಕ್ಷೆ ಶ್ರೀಮತಿ ವಿಮಲಾ, ಪಂ.ನಿಕಟ ಪೂರ್ವ ಅಧ್ಯಕ್ಷರಾದ ಕುಶ ಆರ್ ಮೂಲ್ಯ, ದೀಪಕ್ ಕೋಟ್ಯಾನ್, ಚಂದ್ರಹಾಸ ಶೆಟ್ಟಿ, ಪಂ ಅಭಿವೃದ್ಧಿ ಅಧಿಕಾರಿ ವಿ ಸದಾಶಿವ ಮೂಲ್ಯ, ಕಾರ್ಯದರ್ಶಿ ರಮೇಶ್ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಜಯ ಎಸ್ ಕೋಟ್ಯಾನ್, ಹರೀಶ್ ಶೆಟ್ಟಿ ಇನ್ನಾ, ಸುರೇಶ್ ಕುಲಾಲ್, ಶೇಖರ್ ಪೂಜಾರಿ, ರಿಕ್ಷಾ ಮಾಲಕರು ಸುರೇಶ್ ಮೂಲ್ಯ, ಯೋಗೇಶ್ ಮೂಲ್ಯ, ರಮೇಶ್ ಶೆಟ್ಟಿ, ಸೋಮನಾಥ್ ಪೂಜಾರಿ, ಪ್ರಭಾಕರ್ ಪೂಜಾರಿ, ಸತೀಶ್ ಮೂಲ್ಯ, ರಾಬರ್ಟ್, ಸಂತೋಷ್, ಗ್ರಾಮ ಪಂಚಾಯತ್ ಸಿಬ್ಬಂದಿ ಸ್ವಾತಿ, ಭವಾನಿ, ನಯನ, ಯಶೋಧರ್ ಉಪಸ್ಥಿತರಿದ್ದರು.

 

Related posts

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೋಳ ಪ್ರಾಪ್ತಿ ಎಸ್. ಪೂಜಾರಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿ

Madhyama Bimba

ಕಾರ್ಕಳ: ಮಹಡಿಯಿಂದ ಬಿದ್ದು ಗಾಯ

Madhyama Bimba

ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಆಹ್ವಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More