ಕಾರ್ಕಳ

ನೀರ್ಕೆರೆ ಸೇತುವೆ ಕಾಮಗಾರಿಗೆ ರಸ್ತೆ ಬದಲಾವಣೆ

ಮೂಡುಬಿದಿರೆ ತಾಲೂಕಿನ ಸಂಪಿಗೆ–ಅಶ್ವತ್ಥಪುರ–ನೀರ್ಕೆರೆ–ಮಂಜನಕಟ್ಟೆ ರಸ್ತೆಯಲ್ಲಿರುವ ನೀರ್ಕೆರೆ ಸೇತುವೆ ಕಾಮಗಾರಿ ನಡೆಯಲಿರುವುದರಿಂದ ಆ ಭಾಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಸುಮಾರು ರೂ.9.90 ಕೋಟಿ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಸಾರ್ವಜನಿಕರು ಗಮನಿಸುವಂತೆ ಎಚ್ಚರಿಸಲಾಗಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಬ್ಯಾರಿಕೇಡ್‌ಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗುತ್ತದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಸೆಕ್ಷನ್ 198(ಎ) ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳಾಗಿ
ನೀರ್ಕೆರೆ–ಸಂಪಿಗೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ನೀರ್ಕೆರೆ–ಮುದಡಿಪು–ಮುಲ್ಕಿ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಬೇಕು. ಮಂಜನಕಟ್ಟೆ–ಅಶ್ವತ್ಥಪುರ ಭಾಗದ ವಾಹನಗಳು ಸಮೀಪದ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ಈ ಆದೇಶವು ಫೆಬ್ರವರಿ 23, 2026ರಿಂದ ಫೆಬ್ರವರಿ 22, 2028ರವರೆಗೆ, ಅಂದರೆ 24 ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ.

Related posts

ಅಜೆಕಾರು: ನೇಮೊಟ್ಟು ದಿ| ಸಂಪಾವತಿ ಶೆಡ್ತಿಯವರ ಸ್ಮರಣಾರ್ಥ ಬಸ್ಸುತಂಗುದಾಣ ಉದ್ಘಾಟನೆ

Madhyama Bimba

ಮೇ 17ರಂದು ಆಳ್ವಾಸ್ ಕ್ಯಾಂಪಸ್ ನಲ್ಲಿ ನಾದ ಧ್ಯಾನ- ಸಾರ್ವಜನಿಕರಿಗಾಗಿ ಉಚಿತ ಪ್ರವೇಶ

Madhyama Bimba

ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸಭೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More