ಕಾರ್ಕಳ

ಮುಂಡ್ಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಗಲು ಬ್ರಹ್ಮ ರಥೋತ್ಸವ ಸಂಪನ್ನ

ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ವರ್ಷಾವಧಿ ನಡೆಯುವ ಹಗಲು ಬ್ರಹ್ಮ ರಥೋತ್ಸವ ಕ್ಷೇತ್ರದ ಪ್ರದಾನ ಅರ್ಚಕ ರಾಮದಾಸ ಆಚಾರ್ಯರ ನೇತೃತ್ವದಲ್ಲಿ ಎಡಪದವು ನಾರಾಯಣ ತಂತ್ರಿಗಳ ಪೌರತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಕಲಶಾಭಿಷೇಕ ಪೂರ್ವಾಹ್ನ ೧೧ಗಂಟೆಗೆ ಮಹಾಪೂಜೆ, ದೇವರ ಉತ್ಸವ ಬಲಿಮೂರ್ತಿ ಬಲಿ ದರ್ಶನ, ದುರ್ಗಾಪರಮೇಶ್ವರಿ ಅಮ್ಮನವರ ರಥೋರಣ, ಹಗಲು ರಥೋತ್ಸವ ಪಲ್ಲಪೂಜೆ ,ಮಹಾ ಅನ್ನ ಸಂತರ್ಪಣೆ ನೆರವೇರಿತು.

ಈ ಸಂದರ್ಭದಲ್ಲಿ ದೇವಳದ ಪವಿತ್ರ ಪಾಣಿ ರಾಮ ಮಡ್ಮಣ್ಣಾಯ ದೇಗುಳದ ಕಾರ್ಯನಿರ್ವಹಣಾಕಾರಿ ಶಿವಪ್ರಸಾದ್ ಪಿ. ರಾವ್ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಎಸ್ . ಶೆಟ್ಟಿ ಕೋರಿಬೆಟ್ಟು ಗುತ್ತು , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುಜಾತ ಸುಭೋದ್ ಶೆಟ್ಟಿ ಸಚ್ಚೇರಪರಾರಿ, ಅಕ್ಷತಾ ವಿಶ್ವಿತ್ ಶೆಟ್ಟಿ ಸಂಕಲಕರಿಯ, ಜಗದೀಶ್ ಶೆಟ್ಟಿ ನಡಿಗುತ್ತು ಸಚ್ಚರಿಪೇಟೆ, ಶೇಖರ್ ಶೆಟ್ಟಿ ಮಾಣೆಬೆಟ್ಟು, ಕೃಷ್ಣ ಪೂಜಾರಿ ಬಂಟ್ರೋಟ್ಟು, ಸುರೇಶ್ ಸಾಲಿಯಾನ್ ಅಲಂಗಾರ್, ನಳಿನಾಕ್ಷಿ ರಾಜು ಸೇರಿಗಾರ ಕಡಪು ಕರಿಯ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಮುಲ್ಲಡ್ಕ ಪರಾರಿ, ಪ್ರಸಾದ್ ಶೆಟ್ಟಿ ಅಂಗಡಿಗುತ್ತು ಸುಧಾಕರ್ ಶೆಟ್ಟಿ ಗರಡಿ, ಹರಿ ಭಟ್, ಅರುಣ್ ಭಟ್, ಊರ ಪರವೂರ ಭಕ್ತಾದಿಗಳು ಮುಂಡ್ಕೂರು ಮುಲ್ಲಡ್ಕ ,ಇನ್ನಾ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುಮಾರು 10 ಸಾವಿರ ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸಿದರು.

Related posts

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ ಕೆ. ಬಿ. ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

Madhyama Bimba

ಕ್ರೈಸ್ಟ್‌ಕಿಂಗ್: ಪ್ರೌಢ ಶಾಲಾ ವಾರ್ಷಿಕೋತ್ಸವ

Madhyama Bimba

ದೇಹದಾರ್ಡ್ಯ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ: ಮುದ್ರಾಡಿಯ ನೈದಿಲ್ ಪೂಜಾರಿ ಅವರಿಗೆ ಸನ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More