ಮೂಡುಬಿದಿರೆ

ಜ್ಞಾನದೊಂದಿಗೆ ಸಂವೇದನೆ, ಭಾವನೆ ಇರಲಿ

ಶಿಕ್ಷಣ ಇಂದು ಉದ್ಯೋಗಕ್ಕೆ ಸೀಮಿತವಾಗುತ್ತಿದೆ. ಸಂಸ್ಕಾರ ಕೊಡುವಲ್ಲಿ ಶಿಕ್ಷಣ ಹಿಂದುಳಿಯಬಾರದು ಎಂದು ಸರ್ವಜ್ಞನ ಉಲ್ಲೇಖದೊಂದಿಗೆ ಹಿರಿಯ ಸಾಹಿತಿ ಡಾ. ಬಿ. ಪಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು.

ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ನಡೆದ ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ವಿಶೇಷೋಪನ್ಯಾಸ ನೀಡಿದರು.

ಜ್ಞಾನದೊಂದಿಗೆ ಸಂವೇದನೆ, ಭಾವನೆ ಅಗತ್ಯ. ಅವು ಸಮಾನವಾಗಿ ವಿಕಾಸಗೊಳ್ಳಲು ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮಹಾಭಾರತ, ರಾಮಾಯಣ ಕಥನಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ಸಾಹಿತ್ಯ ಮೌಲ್ಯ, ತಾಳ್ಮೆ ಸಾಮಾಜಿಕ ಚಿತ್ರಣಗಳನ್ನು ಕೊಟ್ಟು, ವ್ಯಕ್ತಿತ್ವ ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮ್ಮೇಳನಾಧ್ಯಕ್ಷರಾದ ಅಬ್ದುಲ್ ಹಮೀದ್ ಪಕ್ಕಲಡ್ಕ, ಮಿಜಾರು ಕಾಲೇಜಿನ ಪ್ರಾಂಶುಪಾಲರಾದ ಚಂದ್ರು ವೇದಿಕೆಯಲ್ಲಿದ್ದರು.

ಉಪನ್ಯಾಸಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

Related posts

ಜೋಗೊಟ್ಟು ಹಾಲು ಉತ್ಪಾದಕರ ಸಂಘದ ಕಟ್ಟಡ “ನವನೀತ” ಲೋಕಾಪ೯ಣೆ

Madhyama Bimba

ಎಲ್‌ಪಿಜಿ ಸರಬರಾಜು ಬಗ್ಗೆ ಕರ್ನಾಟಕ ಸರ್ಕಾರ ಮಹತ್ವದ ಕ್ರಮ

Madhyama Bimba

ಮೂಡುಬಿದಿರೆ: ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಶುಭಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More