ಕಾರ್ಕಳಮೂಡುಬಿದಿರೆ

ಚಿನ್ನದ ರೇಟು ನೋಡುತ್ತೇವೆ. ಕೃಷಿ ರೇಟು ನೋಡುವಂತಾಗಲಿ

ಇಂದು ಯುವಜನತೆ ಮೊಬೈಲ್ ಮೂಲಕ ಚಿನ್ನದ ರೇಟು ಹುಡುಕುತ್ತೇವೆ. ಆದರೆ ಭತ್ತ, ಕೃಷಿ ರೇಟು ಹುಡುಕಲು ಭತ್ತ ಇಲ್ಲದಂತಾಗಿದೆ ಎಂದು ಪೆರ್ವಾಜೆ ಪಿಎಂ ಶ್ರೀ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಅಸ್ಮಾ ಅಭಿಪ್ರಾಯಪಟ್ಟರು.

ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಕೃಷಿ ಬದುಕು ವಿಚಾರವಾಗಿ ಮಾತನಾಡಿದರು.

ಮಣ್ಣು ಸಂರಕ್ಷಿಸಿ, ಮಣ್ಣು ಉಸಿರಾಡಲು ಅವಕಾಶ ಕೊಡಿ. ಅದರ ಜೀವಚೈತನ್ಯ ಶ್ರೇಷ್ಠವಾದುದು ಎಂದರು.
ಭೂಮಿ ತಾಯಿ ಎಂಬ ಗೌರವ ಮರೆತು ಬಿಟ್ಟರೆ ಭತ್ತದ ತಳಿಯ ಗೌರವ ಉಳಿಸಲು ಸಾಧ್ಯವಿಲ್ಲ. ಮಕ್ಕಳಲ್ಲಿ ಭತ್ತ, ಕೃಷಿಯ ಪ್ರೀತಿ ಬೆಳೆಸಬೇಕು. ಅವಾಗ ಭವಿಷ್ಯ ಸಂಪನ್ನತೆ ಕಾಣಲು ಸಾಧ್ಯ ಎಂದರು.

ಸಮ್ಮೇಳನಾಧ್ಯಕ್ಷರಾದ ಅಬ್ದುಲ್ ಹಮೀದ್ ಪಕ್ಕಲಡ್ಕ, ಆಳ್ವಾಸ್ ಹೋಮಿಯೋಪತಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆರಾಲ್ಡ್ ರೋಶನ್ ಪಿಂಟೋ, ಹಿರಿಯ ಸಾಹಿತಿ ಜಯಂತಿ ಬಂಗೇರ, ಚೇತನ ರಾಜೇಂದ್ರ ಹೆಗ್ಡೆ, ಉಳ್ಳಾಲ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ. ಧನಂಜಯ್ ಕುಂಬ್ಳೆ ವೇದಿಕೆಯಲ್ಲಿದ್ದರು.

ಶ್ರೀಮತಿ ಅನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related posts

ಸೇನಾ ಪೂರ್ವ ಸಿದ್ಧತಾ ತರಬೇತಿ : ಅರ್ಜಿ ಸಲ್ಲಿಕೆ – ಅವಧಿ ವಿಸ್ತರಣೆ

Madhyama Bimba

ಕಬ್ಬಿನಾಲೆಯಲ್ಲಿ ಹೆಚ್ಚಿದ ಆನೆ ಹಾವಳಿ- ಭಯದಿಂದ ಮನೆ ಬಿಟ್ಟು ಹೋದ ಕುಟುಂಬ

Madhyama Bimba

ಮೂಡುಬಿದಿರೆ ಪುರಸಭೆಗೆ ಹೈ ಕೋರ್ಟ್ ನಿರ್ದೇಶನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More