ಕಾರ್ಕಳ

ಮುದ್ರಾಡಿಯಲ್ಲಿ ಅಂಬಾತನಯರ ಸಂಸ್ಮರಣೆ

ಹೆಬ್ರಿ :ಮುದ್ರಾಡಿಯಂತಹ ಚಿಕ್ಕ ಊರಿನ ಹೆಸರನ್ನು ನಾಡಿನ ಜಗದಗಲ ಪಸರಿಸಿದ ಹಿರಿಮೆ ಅಂಬಾತನಯ ಮುದ್ರಾಡಿಯವರದ್ದು. ನಿವೃತ್ತಿಯ ನಂತರವೂ ವೃತ್ತಿಯಲ್ಲಿ ತೊಡಗಿಕೊಂಡು ಅಪಾರ ಸಾಹಿತ್ಯ ಕೃಷಿಯಲ್ಲಿ ನಲಿದಾಡಿದ ಕಾಯಕ ಯೋಗಿಯವರು. ಸಾಹಿತ್ಯದ ಹತ್ತು- ಹಲವಾರು ಪ್ರಕಾರಗಳಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡ ಧೀಮಂತರು. ಕಡಿಮೆ ಶಿಕ್ಷಣ ಪಡೆದಿದ್ದರೂ, ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಪಠ್ಯ ರಚಿಸಿದ ಸಾಧಕ ಅಂಬಾತನಯರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾಗಿ, ಸಾಹಿತ್ಯ ರಥದ ಚುಕ್ಕಾಣಿಯನ್ನು ಸರಿಯಾದ ದಿಶೆಯಲ್ಲಿ ಜಿಲ್ಲೆಯಾದ್ಯಂತ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನಕ್ಕೆ ಕೊಂಡು ಹೋದವರು. ನಾಡಿನ ಹಲವಾರು ಖ್ಯಾತನಾಮ ಸಾಹಿತಿಗಳ ಬಳಗದಲ್ಲಿ ಗುರುತಿಸಿಕೊಂಡ ಅಂಬಾತನಯರು ಪಾರ್ತಿಸುಬ್ಬದಂತಹ ಶ್ರೇಷ್ಠ ಪುರಸ್ಕಾರಗಳನ್ನು ಪಡೆದ ಸಾಹಿತ್ಯ ಲೋಕದ ಮಾಣಿಕ್ಯ ಎಂದು ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ್ ಭಟ್ ಹೇಳಿದರು.

 

ಅವರು ಮುದ್ರಾಡಿಯ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಊರಿನ ಹಿರಿಯ ಸಾಹಿತಿ ಮತ್ತು ಶಾಲೆಯ ಟ್ರಸ್ಟ್ರಿಯೂ ಆಗಿದ್ದ ಅಂಬಾತನಯ ಮುದ್ರಾಡಿಯವರ ಮೂರನೇ ವರ್ಷದ ಸಂಸ್ಮರಣೆಯಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಶಿಕ್ಷಕ ಮಹೇಶ್ ನಾಯ್ಕ ಕೆ. ಮತ್ತು ವಿದ್ಯಾರ್ಥಿ ಪ್ರತೀಕ್ ಅಂಬಾತನಯರ ಬಗ್ಗೆ ವಿಚಾರ ಹಂಚಿಕೊಂಡರು.

ಕನ್ನಡ ಭಾಷಾ ಶಿಕ್ಷಕ ಪಿವಿ ಆನಂದ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ಯಾಮಲಾ ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಚಂದ್ರಕಾಂತಿ ಹೆಗ್ಡೆ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಎಂ., ಶಾಲಾ ವಿದ್ಯಾರ್ಥಿ ನಾಯಕ ಕಾರ್ತಿಕ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಬೆಳ್ಮಣ್ ಸರಕಾರಿ ಮಾದರಿ ಶಾಲೆ ಪ್ರಾರಂಭೋತ್ಸವ – ಎಲ್‌ಕೆಜಿ-ಯುಕೆಜಿ ತರಗತಿಗಳ ಉದ್ಘಾಟನೆ

Madhyama Bimba

ಕಾರ್ಕಳದಲ್ಲಿ ಮೇ.24 ರಂದು ಜೈ ಭೀಮ್ ಯುವ ಸೇನಾ ಟ್ರಸ್ಟ್ ನ ದ್ವಿತೀಯ ವರ್ಷದ ಸಂಭ್ರಮಾಚರಣೆ

Madhyama Bimba

ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ಸರ್ಕಾರದ ನಿರ್ಧಾರ, ಈ ವಿಚಾರವನ್ನು ಬಿಜೆಪಿ ಸುಖಾಸುಮ್ಮನೇ ರಾಜಕೀಯಗೊಳಿಸುತ್ತಿದೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More