ಕಾರ್ಕಳ

ಕಾರ್ಕಳ ಜೋಡುರಸ್ತೆಯಲ್ಲಿ ಮಾನಸ ಕಂಫರ್ಟ್ಸ್ ಬೋರ್ಡಿಂಗ್ & ಲಾಡ್ಡಿಂಗ್ ಶುಭಾರಂಭ

ಕಾರ್ಕಳ: ಕಾರ್ಕಳವನ್ನು ಕೇಂದ್ರವಗಿರಿಸಿಕೊಂಡು ಬೆಳೆಯುತ್ತಿರುವ ಜೋಡುರಸ್ತೆಯ ಕಾರ್ಲ ಸಿಟಿಸೆಂಟರ್‌ನ ಕಟ್ಟಡದಲ್ಲಿ ಮಾನಸ ಕಂಫರ್ಟ್ಸ್ ಬೋರ್ಡಿಂಗ್ & ಲಾಡ್ಡಿಂಗ್‌ನ ಉದ್ಘಾಟನಾ ಸಮಾರಂಭವು ಫೆ. 26ರಂದು ನಡೆಯಿತು.


ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಡಾ| ವೀರಪ್ಪ ಮೊಯಿಲಿ ಉದ್ಘಾಟಿಸಿ ಮಾತನಾಡಿ ಹೊಸ ಹೊಸ ಉದ್ಯಮಗಳು ಆರಂಭವಾಗುವುದರಿಂದ ಪಟ್ಟಣಗಳು ಅಭಿವೃದ್ಧಿ ಹೊಂದಲು ಸಾಧ್ಯ. ಆ ಮೂಲಕ ಆರ್ಥಿಕತೆ ಬೆಳೆದು ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.


ಉದ್ಯಮದ ಪಾಲುದಾರರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು ತಮ್ಮ ಸೇವಾ ಕಾರ್ಯ ಇತರರಿಗೆ ಮಾದರಿಯಾಗಿ ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಶುಭ ಸಮಾರಂಭದಲ್ಲಿ ವೀರಪ್ಪ ಮೊಯ್ಲಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕುಕ್ಕುಂದೂರು ಪಂಚಾಯತಿಯ ೯ ಮಂದಿ ಸ್ವಚ್ಚತಾ ಕಾರ್ಮಿಕರನ್ನು, ಅಹಿಂಸಾ ಅನಿಮಲ್ ಕೇರ್‌ನ ವೀರು, ಸುರಕ್ಷಾ ಆಶ್ರಮದವರನ್ನು, ವಿಜೇತಾ ವಿಶೇಷ ಶಾಲೆಯ ಕಾರ್ಯದರ್ಶಿ ಹರೀಶ್ ಶೆಟ್ಟಿಯವರನ್ನು ಗುರುತಿಸಿ ಗೌರವಿಸಲಾಯಿತು.

ಕಾರ್ಕಳ ಮೈನ್ ಶಾಲೆಗೆ ಸುಣ್ಣಬಣ್ಣ, ಆರ್ಥಿಕ ನೆರವು, ಕಾರ್ಕಳ ನಗರ ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಹಸ್ತಾಂತರಿಸಲಯಿತು.

ಈ ಸಂದರ್ಭದಲ್ಲಿ ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ, ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಗಣನಾಥ ಶೆಟ್ಟಿ, ಉದ್ಯಮಿ ಸಂತೋಷ್ ಡಿಸಿಲ್ವ, ವಕೀಲರಾದ ಮಣಿರಾಜ ಶೆಟ್ಟಿ, ನ್ಯಾಯವಾದಿ ಶೇಖರ ಮಡಿವಾಳ, ಹರಿ ಮೊಗೆರಾಯ, ಜನಜಾಗೃತಿ ವೇದಿಕೆಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಪುರಸಭಾ ಮಾಜಿ ಸದಸ್ಯ ಅಶ್ಪಕ್ ಅಹಮ್ಮದ್, ಪ್ರಕಾಶ್ ಆಚಾರ್ಯ, ಕುಕ್ಕುಂದೂರು ಪಂಚಾಯಿತಿ ಅಧ್ಯಕ್ಷೆ ಉಷಾ ಕೆ, ಮುಂತಾದವರು ಉಪಸ್ಥಿತರಿದ್ದರು.

ಉದ್ಯಮದ ಪಾಲದಾರರಾದ ಮಧುರಾಜ್ ಶೆಟ್ಟಿ, ಶಾಕೀರ್ ಅಹಮ್ಮದ್, ನವೀನ್ ದೇವಾಡಿಗ, ಸಮಸ್ತರನ್ನು ಸ್ವಾಗತಿಸಿದರು ಉದ್ಯಮದ ಯಶಸ್ಸಿಗೆ ಸಹಕಾರ ಕೋರಿದರು. .

Related posts

ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ಕ್ರಿಯೇಟಿವ್ ಸ್ಫೂರ್ತಿ ಮಾತು-15 ಸರಣಿ ಕಾರ್ಯಕ್ರಮ

Madhyama Bimba

ಕಾರ್ಕಳ: ಟೆಂಪೋ ಚಾಲಕನಿಗೆ ಹಲ್ಲೆ- ಜೀವ ಬೆದರಿಕೆ

Madhyama Bimba

ಇರ್ವತ್ತೂರು ಸರಕಾರಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More