ಕಾರ್ಕಳ

ಇರ್ವತ್ತೂರು ಸರಕಾರಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ

ಯಕ್ಷ ಕಲಾರಂಗ(ರಿ) ಕಾರ್ಕಳ ಮತ್ತು ಯಕ್ಷದ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು ಇವರ ವತಿಯಿಂದ ಇರ್ವತ್ತೂರು ಶಾಲೆಯ ಹೆಮ್ಮೆ ಹಳೆ ವಿದ್ಯಾರ್ಥಿ ಯಕ್ಷದ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಗೋವಾ ಇವರ ಪ್ರಾಯೋಜಕತ್ವದಲ್ಲಿ ಇರ್ವತ್ತೂರು ಸರಕಾರಿ ಶಾಲೆಯಲ್ಲಿ ಯಕ್ಷಗಾನ ತರಬೇತಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಉದ್ಘಾಟನೆಯನ್ನು ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಸಹಕಾರ ರತ್ನ ಭಾಸ್ಕರ್ ಎಸ್ ಕೋಟ್ಯಾನ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಯಕ್ಷ ಕಲಾರಂಗದ ಅಧ್ಯಕ್ಷರಾದ ವಿಜಯ ಶೆಟ್ಟಿ, ಉಪಾಧ್ಯಕ್ಷರಾದ ಬೇಬಿ ಈಶ್ವರಮಂಗಲ, ಊರಿನ ಹಿರಿಯರಾದ ಜಯಕೀರ್ತಿ ಕಡಂಬ, ನಿವೃತ್ತ ಶಿಕ್ಷಕರಾದ ರಮಾನಾಥ ಶೆಣೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಉದಯ ಎಸ್ ಕೋಟ್ಯಾನ್, ಎಸ್‌ಡಿಎಂಸಿ ಅಧ್ಯಕ್ಷರಾದ ವಿಜಯ ಅಮೀನ್ ,ಮಾಜಿ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶೇಖರ್ ಅಂಚನ್, ಚಂದ್ರರಾಜ ಅತಿಕಾರಿ, ಯಕ್ಷ ಗುರುಗಳಾದ ಮಹಾವೀರ್ ಪಾಂಡಿ, ಗೋಪಾಲ ಪೂಜಾರಿ ಗರಡಿಮನೆ, ದಾನಿಗಳಾದ ಸದಾನಂದ ಪೂಜಾರಿ, ಶೇಖರ್ ಶೆಟ್ಟಿ, ಶೇಖರ್ ಕೋಟ್ಯಾನ್, ಎಸ್‌ಡಿಎಂಸಿ ಉಪಾಧ್ಯಕ್ಷರಾದ ನಳಿನಾಕ್ಷಿ, ಮಾಧ್ಯಮಬಿಂಬ ಪತ್ರಿಕೆ ಹಾಗೂ ಸ್ವಯಂ ಟೈಮ್ಸ್‌ನ ಸಂಪಾದಕರಾದ ಪತ್ರಕರ್ತ ವಸಂತ್, ಶಾಲಾ ಮುಖ್ಯೋಪಾಧ್ಯಾಯರಾದ ಕಲಾವತಿ ಯವರು ಉಪಸ್ಥಿತರಿದ್ದರು.

Related posts

ಸೂರಾಲು: ಭಜನಾ ಸಂಕೀರ್ತನೆಯೊಂದಿಗೆ ಭಕ್ತಿಯ ನಡಿಗೆ ಮಿಯ್ಶಾರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಡೆಗೆ

Madhyama Bimba

ಕಾರ್ಕಳ: ಅನಾರೋಗ್ಯದಿಂದ ವ್ಯಕ್ತಿ ಮೃತ್ಯು

Madhyama Bimba

ಕಾರ್ಕಳ: ಮೋಟಾರ್ ಸೈಕಲ್‌ಗೆ ಗೂಡ್ಸ್ ವಾಹನ ಡಿಕ್ಕಿ-ಗಾಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More