ಕಾರ್ಕಳ

ಕಾರ್ಕಳ ಶಾರದಾ ಮಹಿಳಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ

ಶಾರದಾ ಮಹಿಳಾ ಮಂಡಳಿ (ರಿ) ಕಾರ್ಕಳ ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ. 6ರಂದು ನಡೆಯಿತು.

ಕಾರ್ಕಳ ಪೆರ್ವಾಜೆ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಶ್ರಾವ್ಯ ಶೆಟ್ಟಿ ಹಾಗೂ ಅಬ್ಧಿ ಜೈನ್ ಮತ್ತು ಸುಂದರ ಪುರಾಣಿಕ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಪ್ರಥಮ ಸ್ಥಾನಿಯಾಗಿ ಉತ್ತೀರ್ಣಗೊಂಡ ಹೃಷಿಕೇಶ್ ಇವರನ್ನು ಪುರಸ್ಕರಿಸಲಾಯಿತು.

ಮಂಡಳಿಯ ಸದಸ್ಯೆ ಶ್ರೀಮತಿ ಮಲ್ಲಿಕಾ ಹೆಬ್ಬಾರ್ ಇವರ ಪುತ್ರಿ ಅರ್ಚನಾ ಹೆಬ್ಬಾರ್ ಹಾಗೂ ಶ್ರೀಮತಿ ಸ್ವಾತಿ ಸಂತೋಷ್ ಇವರ ಪುತ್ರಿ ಸಿಂಚನ ಇವರನ್ನು ಕೂಡ ಸನ್ಮಾನಿಸಲಾಯಿತು

.
ಅಧ್ಯಕ್ಷೆ ಶ್ರೀಮತಿ ಜ್ಯೋತಿ ಫಾಟಕ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಸ್ವಾತಿ ತಾಮ್ಹನ್ ಕರ್ ಶುಭಾಶಂಸನೆಗೈದರು. ಕೋಶಾಧಿಕಾರಿ ಶ್ರೀಮತಿ ಸಾವಿತ್ರಿ ಮನೋಹರ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಶ್ರೀಮತಿ ಸ್ವಾತಿ ಸಂತೋಷ್ ವಂದಿಸಿದರು. ಪುರಸ್ಕೃತಗೊಂಡ ವಿದ್ಯಾರ್ಥಿಗಳ ಹೆತ್ತವರು ಹಾಗೂ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದರು.

Related posts

ರಾಹೆ _169 : ಸಾಣೂರು ಚಿಲಿಂಬಿ ಗುಡ್ಡ ಅರಣ್ಯ ಪರಿಸರದಲ್ಲಿ ಹೆದ್ದಾರಿ ಕಾಮಗಾರಿಗೆ ಅನುಮತಿ : ಸಂಸದ ಕೋಟಾರವರ ವಿಶೇಷ ಪ್ರಯತ್ನ ಸಫಲ.

Madhyama Bimba

ಕುಡಿಯುವ ನೀರಿನ ಸಮಸ್ಯೆ : ಸಹಾಯವಾಣಿ ಸ್ಥಾಪನೆ

Madhyama Bimba

ಕಾರ್ಕಳ: ಮುಂಡ್ಕೂರು ನಿವಾಸಿ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More