ಮೂಡುಬಿದಿರೆ

 ಶಿರ್ತಾಡಿ ಸಬ್ಸ್ಟೇಷನ್ ಹೈ ಟೆನ್ಶನ್- ತಂತಿಗಳಿಂದ ಸೃಷ್ಟಿಯಾಗುತ್ತಿದೆ ಟೆನ್ಶನ್

ಮೂಡುಬಿದಿರೆ ತಾಲೂಕಿನ ಶಿರ್ತಾಡಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಮೆಸ್ಕಾಂ ಸಬ್ ಸ್ಟೇಷನ್ ಗೆ ಕೋಟೆಬಾಗಿಲಿನಿಂದ ಶಿರ್ತಾಡಿವರೆಗೆ ದೊಡ್ಡ ದೊಡ್ಡ ಕಂಬಗಳಲ್ಲಿ ಅಳವಡಿಕೆ ಆಗಿರುವ ಹೈ ಟೆನ್ಶನ್ ವೈರುಗಳು ಅಪಾಯ ಉಂಟು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.


ಈ ಪ್ರದೇಶದ ಮಾರ್ಪಾಡಿ ಗ್ರಾಮದ ಮರಿಯಾಡಿ ಎಂಬಲ್ಲಿ ಹೈ ಟೆನ್ಶನ್ ತಂತಿಗಳು ಆಸುಪಾಸಿನ ಮನೆಗಳವರಿಗೆ ಟೆನ್ಶನ್ ನೀಡಲಾರಂಭಿಸಿದೆ. ವೈರುಗಳಿಂದ ಬೃಹತ್ ಸ್ಪೋಟದೊಂದಿಗೆ ಬೆಂಕಿ ಉಂಡೆಗಳು ಚೆಲ್ಲಾಪಿಲ್ಲಿ ಆಗಿ ಉದುರಿ ಬೀಳುತ್ತಿದ್ದು, ಆಸುಪಾಸಿನ ಮನೆಗಳವರಲ್ಲಿ ತುಂಬಾ ಭೀತಿಯ ವಾತಾವರಣ ಸೃಷ್ಟಿಸುತ್ತಿದೆ. ಈಗಾಗಲೇ ಸುಮಾರು ಆರು ಬಾರಿ ಇಂತಹ ಸನ್ನಿವೇಶಗಳು ಸೃಷ್ಟಿಯಾಗಿದ್ದು, ಪ್ರತಿ ಬಾರಿಯೂ ಮೆಸ್ಕಾಂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸುವಂತೆ ಕೋರಿಕೊಂಡಿದ್ದರು ಪ್ರಯೋಜನವಾಗಿರಲಿಲ್ಲ. ಇಂದು (ಮಾರ್ಚ್ ಹತ್ತರಂದು) ಮುಂಜಾನೆಯ ಸಮಯ ಮತ್ತೆ ಹೈ ಟೆನ್ಶನ್ ವಯರ್ಗಳಿಂದ ಸ್ಫೋಟದ ಸದ್ದು ಕೇಳಿ ಬೆಂಕಿ ಉಂಡೆಗಳು ಸುತ್ತಮುತ್ತ ಪಸರಿಸಿದ್ದು ಮಾತ್ರವಲ್ಲದೆ ಆಸು ಪಾಸಿನ ಕೆಲವು ಮನೆಗಳ ವಿದ್ಯುತ್ ಮೀಟರ್ ಸುಟ್ಟು ಹೋಗಿದೆ. ಅಲ್ಲದೆ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾಗಿದೆ. ವಿದ್ಯುತ್ ತಂತಿ ತುಂಡಾಗಿದೆ.

ಈ ಬಗ್ಗೆ ಈಗಾಗಲೇ ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಾಗಿದೆ.

 

Related posts

ಎ ಜಿ ಸೋನ್ಸ್  ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

Madhyama Bimba

  ನೆಲ್ಲಿಕಾರು ಪಂಚಾಯತ್ ಮಾಜಿ ಅಧ್ಯಕ್ಷೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶ

Madhyama Bimba

ಮೂಡಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಸಾಧನೆಯ ಶಿಖರ: ದ್ವಿತೀಯ ಪಿಯುಸಿಯಲ್ಲಿ 32 ರ್‍ಯಾಂಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More