ಕಾರ್ಕಳ

ಶ್ರೀರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ ಕಾರ್ಕಳ- ಇದರ ಅಮೃತ ಮಹೋತ್ಸವ ಸಂಭ್ರಮ ಮತ್ತು ನೂತನ ಕಟ್ಟಡ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀರಾಮಪ್ಪ ಎಜುಕೇಶನ್ ಟ್ರಸ್ಟ್ ( ರಿ.) ಕಾರ್ಕಳ ವಿದ್ಯಾ ಭಾರತಿ ಸಂಯೋಜಿತ ಶ್ರೀರಾಮಪ್ಪ ಅನದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುಲ್ಕೇರಿ ಕಾರ್ಕಳ, ಹಳೆ ವಿದ್ಯಾರ್ಥಿ ಸಂಘ ಜಂಟಿ ಆಶ್ರಯದಲ್ಲಿ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ ಕಾರ್ಕಳ ಇಲ್ಲಿ ನಡೆಯಿತು.


ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿಗಳಾದ ಕೆ ಉಮೇಶ್ ರಾವ್ ಆಮಂತ್ರಣ ಪತ್ರಿಕೆಯ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಕ್ಷೇತ್ರದ ಪ್ರಧಾನ ಅರ್ಚಕರಾದ ಸದಾನಂದ ಶಾಂತಿ, ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಧರ್ ಎನ್. ಸುವರ್ಣ, ಕೋಶಾಧಿಕಾರಿ ಸಂತೋಷ್ ಹೆಗ್ಡೆ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಹೆಗ್ಡೆ, ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರು ಡಾ. ಜ್ಞಾನೇಶ್ ಕಾಮತ್, ಕಾರ್ಯದರ್ಶಿ ಹರೀಶ್ ಅಂಚನ್, ಅಮೃತ ಮಹೋತ್ಸವ ಕಾರ್ಯಕ್ರಮದ ಸಂಯೋಜಕರಾದ ಪ್ರಕಾಶ್ ರಾವ್, ನಿವೃತ್ತ ಅಧ್ಯಾಪಕರಾದ ಅಣ್ಣು ಮಾಸ್ಟ್ರು, ಅಧ್ಯಾಪಕರಾದ ಸುಧಾಕರ್ ಸಮಿತಿಯ ಸದಸ್ಯರಾದ ವಸಂತ್.ಎಂ, ಸಂತೋಷ್ ರಾವ್, ತಾರನಾಥ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.


ಅಮೃತ ಮಹೋತ್ಸವ ಸಮಿತಿಯ ಸಂಚಾಲಕರಾದ ಪ್ರಕಾಶ್ ರಾವ್ ಸ್ವಾಗತಿಸಿ ವಂದಿಸಿದರು.

Related posts

ಬೈಲೂರು ಬಿ.ಇ.ಯಂ ಶಿಕ್ಷಣ ಸಂಸ್ಥೆಗಳ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಗುರುಪ್ರಾಸಾದ್ ಶೆಟ್ಟಿ

Madhyama Bimba

ಮುದ್ರಾಡಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Madhyama Bimba

ರಕ್ತದಾನ ಜಾತಿ ಧರ್ಮಗಳನ್ನು ಮೀರಿದ ಮಾನವೀಯ ಸೇವೆ: ಡಾ. ಮಂಜುನಾಥ್ ಎ.ಕೋಟ್ಯಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More