ಕಾರ್ಕಳ

ಜೈ ತುಳು ಸಿನಿಮಾದ ಸಂಭಾಷಣೆಗಾಗಿ ಕೋಸ್ಟಲ್ ಫಿಲ್ಮ್ ಅವಾರ್ಡನ್ನು ಮುಡಿಗೇರಿಸಿಕೊಂಡ ಪ್ರಸನ್ನ ಶೆಟ್ಟಿ ಬೈಲೂರು

ಕಾರ್ಕಳ: ರೂಪೇಶ್ ಶೆಟ್ಟಿ ನಿರ್ದೇಶನದ ಜೈ ತುಳು ಚಿತ್ರದ ಸಂಭಾಷಣೆಗಾಗಿ ಕೋಸ್ಟಲ್ ಫಿಲ್ಮ್ ಅವಾರ್ಡನ್ನು ಬೈಲೂರು ಪ್ರಸನ್ನ ಶೆಟ್ಟಿಯವರು ಮತ್ತೊಮ್ಮೆ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ. 24ರಂದು ಮುಲ್ಕಿ ಸುಂದರ ರಾಮ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ಮುಲ್ಕಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

2022ನೇ ಸಾಲಿನಲ್ಲಿ ಗಿರ್‌ಗಿಟ್, 2023ನೇ ಸಾಲಿನಲ್ಲಿ ರಾಜ್ ಸೌಂಡ್ಸ್ & ಲೈಟ್ಸ್, 2024ನೇ ಸಾಲಿನಲ್ಲಿ ಸರ್ಕಸ್ ತುಳು ಚಲನಚಿತ್ರಕ್ಕೆ ಸಂಭಾಷಣೆ ಬರೆದು ಕೋಸ್ಟಲ್ ಫಿಲ್ ಅವಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದರು.

ಖ್ಯಾತ ನಾಟಕ ಕಲಾವಿದರಾದ ಇವರು ಚೈತನ್ಯ ಕಲಾವಿದರು ನಾಟಕ ತಂಡವನ್ನು ಆರಂಭಿಸಿ ಆ ಮೂಲಕ ಹಲವಾರು ನಾಟಕ ಕಲಾವಿದರನ್ನು ಹುಟ್ಟು ಹಾಕಿ ಪ್ರೋತ್ಸಾಹಿಸಿದ ಇವರು ನಾಟಕವನ್ನು ರಚಿಸಿ ನಿರ್ದೇಶನ ಮಾಡಿ ನಿರ್ದೇಶಕರಾಗಿಯೂ ಯಶಸ್ವಿಯಾಗಿದ್ದಾರೆ.

ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲೂ ಪ್ರಸನ್ನ ಶೆಟ್ಟಿ ಮಿಂಚಿದ್ದಾರೆ, ತನ್ನದೇ ಆದ ಅಭಿಮನಿ ಬಳಗವನ್ನು ಹೊಂದಿರುವ ಇವರು ಯಕ್ಷಗಾನದಲ್ಲೂ ಹಾಸ್ಯ ಪಾತ್ರಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಲಭಿಸಿವೆ.

Related posts

ಮೂಡಾ ಸೈಟು ಹಿಂದಿರಿಗಿಸಿರುವುದು ಭಯದ ಶರಣಾಗತಿಯಲ್ಲ: ಬಿಪಿನಚಂದ್ರ ಪಾಲ್ ನಕ್ರೆ

Madhyama Bimba

ಪ್ರತಿಭಾ ಕಾರಂಜಿಯಲ್ಲಿ ಎಸ್.ವಿ.ಟಿ ಆಂಗ್ಲ ಮಾಧ್ಯಮ ಶಾಲೆಗೆ ನಾಲ್ಕು ಪ್ರಶಸ್ತಿ

Madhyama Bimba

ದಕ್ಷಿಣ ಭಾರತದ ಸಪ್ತ ಪುಣ್ಯ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ- 472 ಕಿ. ಮೀ. ದೂರದ ಪ್ರಯಾಣದ ಧಾರ್ಮಿಕ ಕ್ಷೇತ್ರಗಳನ್ನು ಪಾದಯಾತ್ರೆ ಮೂಲಕ ಸಂದರ್ಶಿಸಿದ ಹೆಬ್ರಿ ತಾಲೂಕು ವಿಪ್ರ ಬಾಂಧವರು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More