ಕಾರ್ಕಳ

ಕಾರ್ಕಳ: ಸಾಣೂರು ಬಳಿ ಮೋಟಾರ್ ಸೈಕಲ್ ಹಾಗೂ ಸ್ಕೂಟಿ ನಡುವೆ ಅಪಘಾತ

ಕಾರ್ಕಳ: ಸಾಣೂರು ಬಳಿ ಮೋಟಾರ್ ಸೈಕಲ್ ಹಾಗೂ ಸ್ಕೂಟಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ಮಾ. 18ರಂದು ವರದಿಯಾಗಿದೆ.


ಮೋಟಾರ್ ಸೈಕಲ್ ಸವಾರ ಸುಕೇಶ್ ಮೂಡಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದು, ಸ್ಕೂಟಿ ಸವಾರ ಹರೀಶ್ ಸುವರ್ಣ ಕಾರ್ಕಳ ಕಡೆಯಿಂದ ಸಾಣೂರು ಕಡೆಗೆ ಹೋಗುತ್ತಿದ್ದು, ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ಪರಿಣಾಮ ಸವಾರರು ಮೋಟಾರ್ ಸೈಕಲ್ ಹಾಗೂ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು, ಹರೀಶ್ ಸುವರ್ಣ ರವರು ಗಂಭೀರ ಸ್ವರೂಪ ಗಾಯಗೊಂಡಿರುತ್ತಾರೆ.

ಚಿಕಿತ್ಸೆಗಾಗಿ ಹರೀಶ್ ಸುವರ್ಣರನ್ನು ಕಾರ್ಕಳದ ಸಿಟಿ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಮುದ್ರಾಡಿ: ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘ ಉದ್ಘಾಟನೆ

Madhyama Bimba

ಹೆಬ್ರಿ ಅಮೃತಭಾರತಿ ವಿದ್ಯಾಲಯದ ಆರು ಸಂಸ್ಕೃತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Madhyama Bimba

ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More