ಕಾರ್ಕಳಹೆಬ್ರಿ

ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸಭೆ

ಹೆಬ್ರಿ : ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸಭೆಯು ಅಧ್ಯಕ್ಷ ಶಂಕರ ಶೇರಿಗಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅದಾಲತ್ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ದಿನಾಂಕಗಳನ್ನು ನಿಗದಿಪಡಿಸಿಕೊಂಡು, ಗ್ರಾಮ ಪಂಚಾಯತಿಗಳಿಗೆ ಮಾಹಿತಿ ನೀಡಿ ಹೆಬ್ರಿ ತಾಲ್ಲೂಕಿನ ಗ್ಯಾರಂಟಿ ಯೋಜನೆಯ ಅದಾಲತ್ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಅಧ್ಯಕ್ಷ ಶಂಕರ ಶೇರಿಗಾರ್ ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ ನವಂಬರ್ ತಿಂಗಳ ವರೆಗೆ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿ ಡಿಸೆಂಬರ ತಿಂಗಳ ಗೃಹಲಕ್ಷ್ಮಿ ಹಣ ಪಾವತಿಯು ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಿಪಿಎಲ್ ಪಡಿತರ ಚೀಟಿಯನ್ನು ಸರ್ಕಾರದ ಮಾನದಂಡದಂತೆ ಆದಾಯ ತೆರಿಗೆ ಜಿಎಸ್ ಟಿ ಪಾವತಿದಾರರು, ಹಾಗೂ ೪ ಚಕ್ರದ ವಾಹನವನ್ನು ಹೊಂದಿರುವವರು ಅನರ್ಹರಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅನಾರೋಗ್ಯ ಸಮಸ್ಯೆಯಿರುವ ಫಲಾನುಭವಿಗಳ ಬಿಪಿಎಲ್ ಪಡಿತರ ಚೀಟಿ ರದ್ದಾಗದಂತೆ ಕ್ರಮ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಬಿ.ಪಿ.ಎಲ್ ಫಲಾನುಭವಿಗಳ ಬಗ್ಗೆ ವಿವರಣೆಯನ್ನು ಸಭೆಯಲ್ಲಿ ನೀಡಲಾಯಿತು. ಬಿ.ಪಿ.ಎಲ್ ಪಡಿತರ ಚೀಟಿಯನ್ನು ಸರಕಾರದ ಮಾನದಂಡದಂತೆ ಆದಾಯ ತೆರಿಗೆ . ಜಿ.ಎಸ್.ಟಿ. ಪಾವತಿದಾರರು, ಹಾಗೂ ನಾಲ್ಕು ಚಕ್ರದ ವಾಹನವನ್ನು ಹೊಂದಿರುವವರು ಅನರ್ಹರಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅನಾರೋಗ್ಯ ಸಮಸ್ಯೆಯಿರುವ ಫಲಾನುಭವಿಗಳ ಬಿ.ಪಿ.ಎಲ್ ಪಡಿತರ ಚೀಟಿ ರದ್ದಾಗದಂತೆ ಕ್ರಮ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಶಕ್ತಿ ಯೋಜನೆ ಬಸ್ ಸೌಕರ್ಯವನ್ನು ಹೆಬ್ರಿ ಸೋಮೇಶ್ವರ ಕ್ಕೆ ಹೋಗುವ ಬಸ್ಸನ್ನು ನೆಲ್ಲಿಕಟ್ಟೆ ವರೆಗೆ ವಿಸ್ತರಿಸಿದರೆ ಶಾಲಾ ವಿಧ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳ ವಿವರ ಹಾಗೂ ಸಮಯದ ಬಗ್ಗೆ ವಿವರ ನೀಡಿದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿಕೊಳ್ಳುವುದಾಗಿ ಇಲಾಖಾಧಿಕಾರಿ ತಿಳಿಸಿದರು.

ಹೆಬ್ರಿ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ್ ರಾವ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್ ಡಿ.ಇ ಸ್ವಾಗತಿಸಿದರು.

Related posts

ಕಾರ್ಕಳ: ಕುಸಿದು ಬಿದ್ದು ಮೃತ್ಯು

Madhyama Bimba

ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನ: ನೂತನ ಬಿಂಬ ಪ್ರತಿಷ್ಠೆ

Madhyama Bimba

ಬಜಗೋಳಿ: ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಸಮಾರೋಪ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More