ಕಾರ್ಕಳಹೆಬ್ರಿ

ಹೆಬ್ರಿ ಅಮೃತ ಭಾರತಿ ವಿದ್ಯಾಲಯದ 4 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆ

ಹೆಬ್ರಿ : ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ 4 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಜನಕಪುರಿ ಸಂಸ್ಕೃತ ಭಾಷಾ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿವರ್ಷವೂ ನೀಡುವ ಕಲಿಕಾ ಪ್ರೋತ್ಸಾಹ ವಿದ್ಯಾರ್ಥಿ ವೇತನವನ್ನು ಹೆಬ್ರಿ ಅಮೃತಭಾರತಿ ವಿದ್ಯಾಲಯದ ಪ್ರೌಢಶಾಲೆಯ ಸಂಸ್ಕೃತ ವಿದ್ಯಾರ್ಥಿಗಳಾದ
10ನೇ ತರಗತಿಯ ವೈಭವ್ ವಾರಿಕ್, ಸಮೀಕ್ಷಾ ಆರ್ ಮತ್ತು 9ನೇ ತರಗತಿಯ ಪ್ರಥಮ್ ಎನ್ ರಾವ್, ಆತ್ರೇಯ ನಾಯಕ್ ಪಡೆಯಲು ಅರ್ಹರಾಗಿದ್ದಾರೆ.

ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿ ವೇತನಕ್ಕೆ ಸಹಕರಿಸಿದ ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಅವರನ್ನು ಸಂಸ್ಥೆಯ ಅಧ್ಯಕ್ಷ ಶೈಲೇಶ್ ಕಿಣಿ ಮತ್ತು ಸಂಸ್ಥೆಯ ಮುಖ್ಯಶಿಕ್ಷಕಿ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.

Related posts

ಕುಕ್ಕುಂದೂರು ಫ್ರೆಂಡ್ಸ್ ಸದಸ್ಯರಿಂದ ಶ್ರೀ ದುರ್ಗಾದೇವಿ ಸರ್ಕಾರಿ ಅನುದಾನಿತ ಶಾಲೆ ಸ್ವಚ್ಛತೆ

Madhyama Bimba

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿಶ್ವ ಸುರಕ್ಷತಾ ದಿನಾಚರಣೆ

Madhyama Bimba

ಕಾರ್ಕಳ: ಜಾಗದ ತಕರಾರು – ತಮ್ಮನಿಂದ ಅಣ್ಣನ ಕೊಲೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More