ಕಾರ್ಕಳಹೆಬ್ರಿ

ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನ: ನೂತನ ಬಿಂಬ ಪ್ರತಿಷ್ಠೆ

ಹೆಬ್ರಿ : ಶಿವಪುರ ಗ್ರಾಮದ ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನದಲ್ಲಿ ದೈವಗಳ ನೂತನ ಬಿಂಬ ಪ್ರತಿಷ್ಠಾಪನೆ ಮತ್ತು ದೈವಗಳ ವಾರ್ಷಿಕ ನೇಮೋತ್ಸವ  ನಡೆಯಿತು.

ತಂತ್ರಿಗಳಾದ ವೇದಮೂರ್ತಿ ಹೆರ್ಗ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಅರ್ಚಕ ನಾಯರಕೋಡು ರಘುಪತಿ ಭಟ್ ನೇತ್ರತ್ವದಲ್ಲಿ ಪ್ರತಿಷ್ಠಾಪನೆಯ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿತು.

ಮೋಕ್ತೆಸರ ರಾಜಾರಾಮ ಹೆಗ್ಡೆ ದಂಪತಿಗಳು ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಗಳ ವಾರ್ಷಿಕ ನೇಮೋತ್ಸವ ನಡೆಯಿತು.

ಖಜಾನೆ ಶ್ರೀ ಕೊಡಮಣಿತ್ತಾಯ ಕುಕ್ಕಿಂತಾಯ ದೈವಸ್ಥಾನದ ಮೋಕ್ತೆಸರ ರಾಜಾರಾಮ ಹೆಗ್ಡೆ, ನಟರಾಜ ಹೆಗ್ಡೆ, ಪ್ರಮುಖರಾದ ಕೆಳಕಜಾನೆ ರಘುರಾಮ ಶೆಟ್ಟಿ, ಕಜಾನೆ ಹೊಸಮನೆ ರಾಜು ಶೆಟ್ಟಿ, ಮೇಲ್ ಕಜಾನೆ ಭುಜಂಗ ಶೆಟ್ಟಿ, ಕಜಾನೆ ಪಡುಮನೆ ವಿಶ್ವನಾಥ ಶೆಟ್ಟಿ ಮತ್ತು ಕುಟುಂಬಸ್ಥರು, ಊರಿನ ಪ್ರಮುಖರು, ಗಣ್ಯರು, ಹತ್ತು ಸಮಸ್ತರು ಭಾಗಿಯಾದರು.

Related posts

ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ- ಮೊಹಮ್ಮದ್ ಅರ್ಮಾನ್ ಶಾಹೀದ್ ರಾಜ್ಯಕ್ಕೆ 6ನೇ ಸ್ಥಾನ

Madhyama Bimba

ಅಜೆಕಾರು: ಟೆಂಪೋ ಡಿಕ್ಕಿ- ಮಕ್ಕಳೀರ್ವರಿಗೆ ಗಾಯ

Madhyama Bimba

ಶಿವಪುರ ಶ್ರೀಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ : ಹೊರೆ ಕಾಣಿಕೆ ಸಮರ್ಪಣೆ – ಧಾರ್ಮಿಕ ಕಾರ್ಯಕ್ಕೆ ಚಾಲನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More