ಕಾರ್ಕಳ: ಬಜಗೋಳಿಯಲ್ಲಿ ವಲಯ ಮಟ್ಟದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭ ಗಣಪತಿ ಸಭಾ ಭವನದಲ್ಲಿ ಮೇ. 17ರಂದು ನೆರವೇರಿತು.
ಶಿಬಿರದಲ್ಲಿ 142 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಭೆಯ ಅಧ್ಯಕ್ಷತೆಯನ್ನು ಧಾರ್ಮಿಕ ಮುಖಂಡರು ಹಾಗೂ ಕ್ವಾರಿ ಮತ್ತು ಕ್ರಶರ್ ಓನರ್‍ಸ್ ಅಸೊಷೀಯೇಶನ್ ರಾಜ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ ವಹಿಸಿ ಮಾತನಾಡಿ ಸಮಾಜದಲ್ಲಿ ಮಕ್ಕಳು ಮುಖ್ಯ ವಾಹಿನಿಗೆ ಬರಲು ಭಜನಾ ಶಿಬಿರಗಳು ಪ್ರಮುಖಪಾತ್ರ ವಹಿಸುತ್ತಿವೆ. ಧಾರ್ಮಿಕ ನಂಬಿಕೆ, ಒಳ್ಳೆಯ ಮನಸ್ಸು ಸಮಾಜದ ಪ್ರಗತಿಗೆ ದಾರಿದೀಪವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ರೂಪಾ ಆರ್. ಶೆಟ್ಟಿ, ಜನಜಾಗೃತಿ ಜಿಲ್ಲಾ ಸದಸ್ಯರಾದ ಹರಿಶ್ಚಂದ್ರ ತೆಂಡೂಲ್ಕರ್ ಶುಭ ಹಾರೈಸಿದರು. ಕಾರ್ಕಳ ಶ್ರೀ ಕ್ಷೇ. ಧ. ಗ್ರಾಮಭಿವೃದ್ದಿ ಯೋಜನೆ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜರವರು ಮಾತನಾಡಿ ಶ್ರೀ ಕ್ಷೇತ್ರದ ಪೂಜ್ಯರಿಗೆ ಭಜನೆ ಬಗ್ಗೆ ಇರುವ ಒಲವು, ಯೋಜನೆ ಕಾರ್ಯಕ್ರಮ, ಮಕ್ಕಳ ಹಿತಶಕ್ತಿಗಳು, ಪೋಷಕರು ನೀಡಿದ ಸಹಕಾರಗಳ ಬಗ್ಗೆ ಉಲ್ಲೇಖಿಸಿ ವಿಚಾರ ತಿಳಿಸಿದರು.
ಜನಜಾಗೃತಿ ವಲಯದ ಅಧ್ಯಕ್ಷರಾದ ನಾರಾಯಣ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೋಟೆಲ್ ಉದ್ಯಮಿ ಸದಾನಂದ ಸಾಲ್ಯಾನ್, ಚೌಕಿ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ವೇದಾ, ಮಲ್ಲಾರ್ ಒಕ್ಕೂಟ ಅಧ್ಯಕ್ಷರು ದಿನೇಶ್ ಸೊನಲೆ, ಮುಡಾರು ಒಕ್ಕೂಟ ಸದಾನಂದ ಕೋಟ್ಯಾನ್, ವಿದ್ಯಾರ್ಥಿಗಳ ಪೋಷಕರು, ಒಕ್ಕೂಟ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಗ್ರಾಮಸ್ಥರು ಗ್ರಾಮಾಭಿವೃದ್ಧಿ ಯೋಜನೆಯ, ಜನಜಾಗೃತಿ ವೇದಿಕೆಯ, ಭಜನಾ ಪರಿಷತ್ತಿನ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ವಲಯದ ಮೇಲ್ವಿಚಾರರಾದ ಶಿವರಾಮ್ ಪ್ರಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಸುಮಿತ್ರ ಧನ್ಯವಾದವಿತ್ತರು. ಭಜನಾ ಪರಿಷತ್ತಿನ ಜಿಲ್ಲಾ ಸಮಾನಾಧಿಕಾರಿ ಸಂತೋಷ್ ಪಿ ಅಳಿಯೂರ್ ಕಾರ್ಯಕ್ರಮ ನಿರೂಪಿಸಿದರು.
