ಕಾರ್ಕಳ

ಅನಂತಶಯನ ಶಾರದಾ ಮಹಿಳಾ ಮಂಡಳಿ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಫಾಟಕ್

ಶಾರದಾ ಮಹಿಳಾ ಮಂಡಳಿ (ರಿ), ಅನಂತಶಯನ ಇದರ  2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಫಾಟಕ್, ಉಪಾಧ್ಯಕ್ಷರಾಗಿ ಶ್ರೀಮತಿ ಸ್ವಾತಿ ಸಂತೋಷ್, ಕಾರ್ಯದರ್ಶಿಯಾಗಿ ಶ್ರೀಮತಿ ಸ್ವಾತಿ ತಾಮ್ಹನಕರ್, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಸುಧಾ ಪ್ರಭು ಹಾಗೂ ಕೋಶಾಧಿಕಾರಿಯಾಗಿ ಶ್ರೀಮತಿ ಸಾವಿತ್ರಿ ಮನೋಹರ್ ಆಯ್ಕೆಯಾದರು.

ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀಮತಿ ಸೌಮ್ಯ ರಾವ್ ಹಾಗೂ ಶ್ರೀಮತಿ ರಶ್ಮಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರೀಮತಿ ಮಲ್ಲಿಕಾ ಹೆಬ್ಬಾರ್ ಮತ್ತು ಶ್ರೀಮತಿ ಐ.ಕೆ. ಪ್ರಭಾವತಿ, ಭಜನಾ ಕಾರ್ಯದರ್ಶಿಗಳಾಗಿ ಶ್ರೀಮತಿ ಅಕ್ಷತಾ ಪ್ರಭು ಮತ್ತು ಶ್ರೀಮತಿ ಶೈಲಜಾ ರತ್ನಾಕರ್ ಇವರುಗಳು ಆಯ್ಕೆಯಾಗಿದ್ದಾರೆ.

ಸುಮಾರು 36 ವರ್ಷಗಳ ಹಿಂದೆ ಪ್ರಾರಂಭವಾದ ಈ ಮಹಿಳಾ ಮಂಡಳಿ, ಹಳೆ ಬೇರು-ಹೊಸ ಚಿಗುರು ಕೂಡಿರುವ ಮರದಂತೆ  18 ರ ನವ ತರುಣಿಯಿಂದ 90 ರ ಜ್ಞಾನ ವೃದ್ಧೆಯನ್ನೂ ಸೇರಿದಂತೆ ಸುಮಾರು 75 ರಷ್ಟು ಸದಸ್ಯೆಯರನ್ನು ಹೊಂದಿ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುಂದೆಯೂ ಕೂಡ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ವಿಚಾರವನ್ನು ನೂತನ ಪದಾಧಿಕಾರಿಗಳು ಹಂಚಿಕೊಂಡಿದ್ದಾರೆ.

Related posts

ಕೆರ್ವಾಶೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ತಂದ ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು

Madhyama Bimba

ಕಾರ್ಕಳ: ರಸ್ತೆ ಬದಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳವು

Madhyama Bimba

ಬೈಲೂರು: ಬಸ್ರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More