ಮೂಡುಬಿದಿರೆ

ಜೋಗೊಟ್ಟು ಹಾಲು ಉತ್ಪಾದಕರ ಸಂಘದ ಕಟ್ಟಡ “ನವನೀತ” ಲೋಕಾಪ೯ಣೆ

ವಾಲ್ಪಾಡಿ ಗ್ರಾಮದ ಜೋಗೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಸ್ವಂತ ಕಟ್ಟಡ “ನವನೀತ” ಮಾರ್ಚ್ 25ರಂದು ಲೋಕಾಪ೯ಣೆಗೊಂಡಿತು.

ದ. ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಮಂಗಳೂರು ಕೊಟ್ಟಾರದ ವೇದಮೂತಿ೯ ಬ್ರಹ್ಮಶ್ರೀ ಕೆ. ಹರಿಪ್ರಸಾದ್ ಭಟ್ ಆಶೀವ೯ಚನ ನೀಡಿದರು.
ದ. ಕ. ಹಾಲು ಉತ್ಪಾದಕರ ಒಕ್ಕೂಟದ ನಿದೇ೯ಶಕ ಕೆ. ಪಿ. ಸುಚರಿತ ಶೆಟ್ಟಿ ನಾಮ ಫಲಕವನ್ನು ಅನಾವರಣಗೊಳಿಸಿದರು.
ದ. ಕ. ಹಾಲು ಒಕ್ಕೂಟದ ಉಪಾಧ್ಯಕ್ಷ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್ ಗೋದಾಮು ಉದ್ಘಾಟಿಸಿ ಮಾತನಾಡಿದರು.

ಜೋಗೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ : ಸ್ಥಳದಾನಿ ಬ್ರಹ್ಮಶ್ರೀ ಕೆ. ಹರಿಪ್ರಸಾದ್ ಭಟ್ ದಂಪತಿ ಸಹಿತ, ದ. ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್ ಅವರನ್ನು, ಕಟ್ಟಡದ ಗುತ್ತಿಗೆದಾರ ಫೆಡ್ರಿಕ್ ಪಿಂಟೋ,
ವಾಲ್ಪಾಡಿ ಗ್ರಾ. ಪಂ. ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುತ್ತಿರುವ ಮೇರಿ ಪಿಂಟೋ, ಫೆಲಿಕ್ಸ್ ಪಿಂಟೋ, ಚಿನ್ನಯ್ಯ ಅವರನ್ನು ಗೌರವಿಸಲಾಯಿತು.ದೇಣಿಗೆ ನೀಡಿದವರನ್ನು ಗುರುತಿಸಲಾಯಿತು.

ದ. ಕ. ಹಾಲು ಒಕ್ಕೂಟದ ನಿದೇ೯ಶಕರುಗಳಾದ ಸವಿತಾ. ಎನ್. ಶೆಟ್ಟಿ, ನಂದರಾಮ್ ರೈ
ಒಕ್ಕೂಟದ ವ್ಯವಸ್ಥಾಪಕ ನಿದೇ೯ಶಕ ವಿವೇಕ್ ಡಿ., ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಧನಂಜಯ, ವಾಲ್ಪಾಡಿ ಚಂದ್ರನಾಥ ಸ್ವಾಮಿ ಬಸದಿಯ ಅಧ್ಯಕ್ಷ ರತ್ನಕುಮಾರ್ ಶೆಟ್ಟಿ ಪೆರಿಬೆಟ್ಟು, ಶಿತಾ೯ಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಫೆಡ್ರಿಕ್ ಪಿಂಟೋ, ವಾಲ್ಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ದ. ಕ ಹಾಲು ಉತ್ಪಾದಕರ ಒಕ್ಕೂಟದ ಮೂಡುಬಿದಿರೆ ವಲಯದ ವಿಸ್ತರಣಾಧಿಕಾರಿ ಸುಚಿತ್ರ, ಸಹಾಯಕ ವ್ಯವಸ್ಥಾಪಕಿ ಜಾನೆಟ್ ರೋಜಾರಿಯೋ ಭಾಗವಹಿಸಿದ್ದರು.

ಕಟ್ಟಡ ಸಮಿತಿಯ ಅಧ್ಯಕ್ಷ ಗುಣಪಾಲ ಮುದ್ಯ ಸ್ವಾಗತಿಸಿದರು. ಜೋಗೊಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಸ್ವಾತಿ ವರದಿ ವಾಚಿಸಿದರು. ರಾಜೇಂದ್ರ ಕುಮಾರ್ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Related posts

ನವಮೈತ್ರಿ ಸಹಕಾರಿ ಸಂಘದ ಸ್ವಂತ ಕಟ್ಟಡ ಮೈತ್ರಿ ಸೌಧ ಉದ್ಘಾಟನೆ

Madhyama Bimba

ಫೆ. 21: ಕರಾವಳಿ ಕೇಸರಿಯಿಂದ ಶನೀಶ್ವರ ಪೂಜೆ, ಸಭಾ ಕಾರ್ಯಕ್ರಮ

Madhyama Bimba

ದರೆಗುಡ್ಡೆ ಸೋಮನಾಥೇಶ್ವರ ಸಂಜೀವಿನಿ ಒಕ್ಕೂಟದಿಂದ ಪಂಚಾಯತ್ ಜನಪ್ರತಿನಿಧಿಗಳಿಗೆ ಅಭಿನಂದನೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More