ಹೆಬ್ರಿ : ಹೆಬ್ರಿ ಶ್ರೀಅನಂತ ಪದ್ಮನಾಭ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಇತ್ತೀಚೆಗೆ ಚುನಾವಣೆ ನಡೆಯಿತು.
ಸೊಸೈಟಿಯ ಅಧ್ಯಕ್ಷರಾಗಿ ಕೆ.ರಾಘವೇಂದ್ರ ಆಚಾರ್ ಮತ್ತು ಉಪಾಧ್ಯಕ್ಷರಾಗಿ ಎಸ್. ರಾಮಕೃಷ್ಣ ಭಟ್ ಆಯ್ಕೆಯಾದರು.
ನಿರ್ದೇಶಕರಾಗಿ ರಾಮಕೃಷ್ಣ ಆಚಾರ್ಯ ಹೆಬ್ರಿ., ಕೆ.ಚಂದ್ರಶೇಖರ ಬಾಯರಿ ಕಬ್ಬಿನಾಲೆ, ಪಿ.ಎನ್. ಲಕ್ಷ್ಮಣ ಭಟ್ ಚಾರ, ಸುಬ್ರಹ್ಮಣ್ಯ ಭಟ್ ರೆಂಜಾಳ ಕಾರ್ಕಳ, ಕೆ.ವಿಶ್ವನಾಥ ಭಟ್ ಕಾರ್ಕಳ, ಸುಧಾಕರ ಭಟ್ ಕಾರ್ಕಳ, ಶಶಿಕಿರಣ್ ಆರ್ ಶಿವಪುರ, ಭಾರತಿ ಕೃಷ್ಣಮೂರ್ತಿ ಕುಂಜಿಬೆಟ್ಟು ಮತ್ತು ರಾಜೇಶ್ವರಿ ಕೆ ತೆಳ್ಳಾರು ಆಯ್ಕೆಯಾಗಿದ್ದಾರೆ.
ಉಡುಪಿ ಸಹಕಾರ ಇಲಾಖೆಯ ಉಪನಿಬಂಧಕರ ಕಚೇರಿಯ ಕೆ.ಆರ್.ರೋಹಿತ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
