Blog

ಮಾರೂರು ಹೊಸಂಗಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮಾರೂರುಗುತ್ತು ಶಂಭು ಎನ್.ಶೆಟ್ಟಿ ನಿಯುಕ್ತರಾಗಿದ್ದಾರೆ.
ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯಡಿ ಮುಂದಿನ ಮೂರು ವರ್ಷಗಳ ಅವಧಿಗೆ ಶಂಭು ಶೆಟ್ಟಿ ಅವರು ಅಧ್ಯಕ್ಷರಾಗಿದ್ದಾರೆ.
ವೇ.ಮೂ. ವೆಂಕಟರಾಜ ಅಸ್ರಣ್ಣ ಪ್ರಧಾನ ಅರ್ಚಕರಾಗಿ , ವೇ.ಮೂ.ರಾಮದಾಸ ಅಸ್ರಣ್ಣ, ಶ್ರೀಮತಿ ಜ್ಯೋತಿಶ್ರೀ ಶೆಟ್ಟಿ, ಶ್ರೀಮತಿ ಮೋಹಿನಿ, ಶ್ರೀಧರ ಪೂಜಾರಿ, ಸಂತೋಷ್ ಪೂಜಾರಿ, ದೀಪಕ್ ಗೌಡ ಹಾಗೂ ಸುರೇಶ್ ದೇವಾಡಿಗ ಅವರು ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಶಂಭು ಶೆಟ್ಟಿ ಅವರು ಈ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ನಾನಿಲ್ತಾರ್ ಕುಲಾಲ ಸಂಘದ ಕ್ರೀಡಾಕೂಟ

Madhyama Bimba

ಆಳ್ವಾಸ್ ಪಿಯುಸಿ ವಾಣಿಜ್ಯ ಪ್ರಥಮ, ವಿಜ್ಞಾನ ದ್ವಿತೀಯ ರಾಜ್ಯ ರ್ಯಾಂಕ್

Madhyama Bimba

ಚಂದ್ರ ಗೌಡ ಮನೆಗೆ ಪರಿಹಾರ ಚೆಕ್ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More