Blog

ನಾಲ್ಕೂರು ಕಜ್ಕೆ ದೇವಸ್ಥಾನಕ್ಕೆ ಸ್ವಾಮೀಜಿ ಪುರ ಪ್ರವೇಶ

ನಾಲ್ಕೂರು ಗ್ರಾಮದ ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಾನುವಾರ  ಪುರಪ್ರವೇಶ ಮಾಡಿದ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ಶಿಷ್ಯ ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿಯವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.


*ಕಜ್ಕೆಯಲ್ಲಿ ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿ ಪುರಪ್ರವೇಶ : ಗುರುವಂದನೆ.*


*ಧರ್ಮ ಕಾರ್ಯದಿಂದ ಪುಣ್ಯ ಪ್ರಾಪ್ತಿ : ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿ*


*ವಿಶೇಷ ವರದಿ* – ✍️✍️
*ಸುಕುಮಾರ್ ಮುನಿಯಾಲ್* .

ಹೆಬ್ರಿ : ನಾವು ಧರ್ಮದ ಕಾರ್ಯವನ್ನು ಮಾಡಿದಾಗ ನಮಗೆ ಜೀವನದಲ್ಲಿ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂತಹ ಮಹಾನ್‌ ಕಾರ್ಯವು ಜ್ಕೆ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಕಜ್ಕೆ ಕ್ಷೇತ್ರದ ಪುರಪ್ರವೇಶ ನನಗೆ ಅತ್ಯಂತ ಸಂತೋಷ ನೀಡಿದೆ. ಗುರುಗಳ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗುವುದಾಗಿ ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿಯವರು ಹೇಳಿದರು.
ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತ ಪರಮಪೂಜ್ಯ ಅನಂತಶ್ರೀ ವಿಭೂಷಿತ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿಗಳವರು ಸನ್ಯಾಸ ದೀಕ್ಷೆ ಸ್ವೀಕರಿಸಿ ಭಾನುವಾರ ಪ್ರಥಮ ಭಾರಿ ಶ್ರೀ ಕ್ಷೇತ್ರ ಕಜ್ಕೆ ಶಾಖಾ ಮಠಕ್ಕೆ ಪುರಪ್ರವೇಶ ಮಾಡಿ ಕ್ಷೇತ್ರದ ಗೌರವ ಸ್ವೀಕರಿಸಿ ಆಶೀರ್ವಚನ ನೀಡಿದರು.
ಕರುಣಾಮಯಿ ಶ್ರೀಗುರುಗಳ ಶಿಷ್ಯನಾಗಿರುವುದಕ್ಕೆ ನನಗೆ ಅತ್ಯಂತ ಹೆಮ್ಮೆಯಿದೆ. ನನ್ನ ಬದುಕು ಪಾವನವಾಗಿದೆ. ಎಲ್ಲರ ಸಮರ್ಪಣಾ ಸೇವೆಯಿಂದ ಕಜ್ಕೆ ಶ್ರೀಕ್ಷೇತ್ರವು ಬೆಳಗುತ್ತಿದೆ ಶ್ರೀ ಜ್ಞಾನ ಘನ ವಿದ್ಯಾತೀರ್ಥ ಮಹಾಸ್ವಾಮೀಜಿಯವರು ಹೇಳಿದರು.
ಪರಮಪೂಜ್ಯ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರು ಆಶೀರ್ವಚನ ನೀಡಿ ನೂತನ ಶ್ರೀಗಳಿಗೆ ನೀಡಿದ ಗೌರವಪೂರ್ಣ ಸ್ವಾಗತದಿಂದ ಮನಸ್ಸು ತುಂಬಿ ಬಂದಿದೆ. ನಮ್ಮ ಜಗದ್ಗುರು ಪೀಠಕ್ಕೆ ೭ ಶಾಖಾ ಮಠಗಳಿದ್ದರೂ ಕಜ್ಕೆ ಶಾಖಾಮಠವು ಕ್ಷೇತ್ರವಾಗಿ ಬೆಳೆಯುತ್ತಿದೆ. ಕಠಿಣ ಸಮಯದಲ್ಲೂ ಎಲ್ಲರೂ ಸೇರಿ ಕಜ್ಕೆ ಕ್ಷೇತ್ರವನ್ನು ಬೆಳೆಸಿ ಮುನ್ನಡೆಸುತ್ತಿದ್ದೀರಿ, ಅತಿಶಯ ಕ್ಷೇತ್ರವಾಗಿ ಕಜ್ಕೆಯು ಬೆಳೆದು ಮುಂದೆ ಬ್ರಹ್ಮ ರಥೋತ್ಸವವನ್ನು ಕೂಡ ತಾಯಿ ಅನ್ನಪೂರ್ಣೇಶ್ವರಿ ಮಾಡಿಸಿಕೊಳ್ಳಲಿದ್ದಾಳೆ. ಶಿಷ್ಯ ಸ್ವೀಕಾರ ಅತ್ಯಂತ ಸಾರ್ಥಕ ಕ್ಷಣ ಎನಿಸುತ್ತಿದೆ, ನೂತನ ಶ್ರೀಗಳ ಮೂಲಕ ಅರೆಮಾದನಹಳ್ಳಿ ಜಗದ್ಗುರು ಪೀಠ ಮತ್ತು ಕಜ್ಕೆ ಕ್ಷೇತ್ರವು ಬೆಳಗಲಿದೆ ಎಂದು ನುಡಿದರು.
ಮುಖ್ಯರಸ್ತೆಯಿಂದ ಇಬ್ಬರು ಶ್ರೀಗಳನ್ನು ಭವ್ಯವಾಗಿ ಸ್ವಾಗತಿಸಿ ಕರೆತರಲಾಯಿತು. ಕ್ಷೇತ್ರದ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು. ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಮತ್ತು ಕಜ್ಕೆ ಶಾಖಾದಲ್ಲಿ ಪೂಜೆ, ಪಾದೂಕ ಪೂಜೆ ನಡೆಯಿತು. ಕ್ಷೇತ್ರದ ಸಂತೋ಼ಷ್‌ ಪುರೋಹಿತ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಸ್ಥಳದಾನಿ ಕಜ್ಕೆ ಶ್ರೀಧರ ಕಾಮತ್‌ ಮಾತನಾಡಿ ಕಜ್ಕೆಯಲ್ಲಿ ಅನ್ನಪೂರ್ಣೇಶ್ವರಿ ಕ್ಷೇತ್ರ ಬೆಳಗುತ್ತಿರುವುದು ಕಂಡು ನನಗೆ ಜೀವನದಲ್ಲಿ ಸಾರ್ಥಕ ಭಾವ ಮೂಡಿದೆ. ಬದುಕು ಪಾವನ ಅನಿಸುತ್ತಿದೆ. ಇನ್ನಷ್ಟು ಮೂಲಸೌಕರ್ಯಗಳು, ಅಭಿವೃದ್ಧಿ ಕಾರ್ಯಗಳು ನಡೆದು ಕ್ಷೇತ್ರ ಬೆಳಗಲಿ ಎಂದು ಆಶಿಸಿದರು
ಸಭೆಯಲ್ಲಿ ಮೌನೇಶ ಆಚಾರ್ಯ ಪರ್ಕಳ, ಶ್ರೀ ವಿಶ್ವಕರ್ಮ ಸಮಾಜಸೇವಾ ಸಂಘಗಳ ಅಧ್ಯಕ್ಷರಾದ ಹೆಬ್ರಿಯ ಮುದ್ರಾಡಿ ಕೇಶವ ಆಚಾರ್ಯ, ಕೊಕ್ಕರ್ಣೆಯ ವಿಶ್ವನಾಥ ಆಚಾರ್ಯ ಕಲ್ಗೋಳಿ, ರಾಜೇಂದ್ರ ಆಚಾರ್ಯ ಸಾಗರ, ಕೆ.ವಿ.ರಮೇಶ ಆಚಾರ್ಯ ಹರಿಖಂಡಿಗೆ, ಮೋಹನ ಆಚಾರ್ಯ ಪೇತ್ರಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ವಿಶ್ವನಾಥ ಆಚಾರ್ಯ ಕಲ್ಗೋಳಿ, ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಜೇಶ ಆಚಾರ್ಯ ಹೆಬ್ರಿ, ಸದಸ್ಯರಾದ ಜಯರಾಮ ಆಚಾರ್ಯ ಹೆಬ್ರಿ, ಕೇಶವ ಆಚಾರ್ಯ ಮುದ್ರಾಡಿ, ಕೊಂಜಾಡಿ ನಾರಾಯಣ ಆಚಾರ್ಯ, ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ, ರತ್ನಾಕರ ಆಚಾರ್ಯ ಶಿವಪುರ, ರವೀಂದ್ರ ಆಚಾರ್ಯ, ಕಲ್ಚಪ್ರ ಶ್ರೀಕಾಂತ್‌ ಆಚಾರ್ಯ ಬಾರ್ಕೂರು, ರವೀಂದ್ರ ಆಚಾರ್ಯ ಪಕ್ಕಾಲು, ಮೋಹನ ಆಚಾರ್ಯ ಪೇತ್ರಿ, ನಾಗೇಶ ಆಚಾರ್ಯ ಉಪ್ಪೂರು, ಸುಕನ್ಯಾ ಆಚಾರ್ಯ ಪಾಡಿಗಾರ, ಕಲಾವತಿ ಶ್ರೀಧರ ಆಚಾರ್ಯ ಹೆಬ್ರಿ, ಗಣಪತಿ ಆಚಾರ್ಯ ಹೊರ್ಲಾಲಿ, ಸುಕುಮಾರ್‌ ಮುನಿಯಾಲ್, ವಿವಿಧ ಗಣ್ಯರು, ಸಂಸ್ಥೆಗಳ ಪ್ರಮುಖರು, ಸಮಾಜದ ಮುಖಂಡರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಜೇಶ ಆಚಾರ್ಯ ಹೆಬ್ರಿ ಸ್ವಾಗತಿಸಿ ನಾರಾಯಣ ಆಚಾರ್ಯ ಕೊಂಜಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಕಾಶ ಆಚಾರ್ಯ ಕುಕ್ಕೆಹಳ್ಳಿ ವಂದಿಸಿ ಮ್ಯಾನೇಜರ್‌ ಜಯರಾಮ ಆಚಾರ್ಯ ಸಹಕರಿಸಿದರು. ಮಹೇಂದ್ರ ಆಚಾರ್ಯ ಹೇರಂಜೆ ನಿರೂಪಿಸಿದರು.

Related posts

ಮಂಜುನಾಥ್ ಪೂಜಾರಿಯವರಿಗೆ ಮಾತೃ ವಿಯೋಗ

Madhyama Bimba

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಆಗಿ ಶೋಭಾ ಭಾಸ್ಕರ್

Madhyama Bimba

ಪತ್ರಕರ್ತರಿಗೆ ಸರಕಾರಿ ಸವಲತ್ತು  ನೀಡಿ – ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More