ಕಾರ್ಕಳ

  ಶಿರ್ತಾಡಿಯಲ್ಲಿ ಕರುಂಗೋಲು ಕುಣಿತದ ಆಚರಣೆ

ತುಳುನಾಡ ಜಾನಪದ ಪ್ರಕಾರಗಳಲ್ಲಿ ಕರುoಗೊಲು ಕುಣಿತಕ್ಕೆ ವಿಶೇಷ ಸ್ಥಾನಮಾನವಿದೆ. ಈ ಕುಣಿತವನ್ನು ಸುಗ್ಗಿ ಹುಣ್ಣಿಮೆಯ ಮೊದಲಿನ ಮೂರು ನಾಲ್ಕು ದಿನ ಅಂದರೆ ಪೂವೆ(ಹುಣ್ಣಿಮೆಯ ಹಿಂದಿನ ದಿನಗಳು )ಯಿಂದ ಪ್ರಾರಂಭಿಸಿ ಮೂರು ನಾಲ್ಕು ದಿನಗಳ ಕುಣಿತದ ನಂತರ ಒಂದು ದಿನದ ರಾಶಿ ಪರ್ವ ಸೇವೆಯು ನಡೆಯುತ್ತದೆ.


ತುಳುನಾಡಿನ ಕಾರಣಿಕ ದೈವಗಳಾದ ಅವಳಿ ವೀರರಾದ “ಕಾನದ – ಕಟದರು” ತುಳುನಾಡಿಗೆ ಅತಿಕಾರೆ ಭತ್ತದ ಬೀಜವನ್ನು ಘಟ್ಟದಿಂದ ತಂದು ಸಾಗುವಳಿ ಮಾಡಿದ ಕಥೆಯ ಸಾರಾಂಶವೇ ಕರುಂಗೋಲು ಕುಣಿತ.
ಇದರ ಪಾಡ್ದನದ ಒಂದು ತುಣುಕು ಈ ಕೆಳಗಿನಂತಿದೆ.
ಪೊಲಿಯೇ ಪೊಲಿಯೆರೆ ಪೊ ಪೂವೆ ಪೋಂಡು ಉಲ್ಲಾಯ ||2||
ಕೋಡಂದೆರೆ ಪುಣ್ಣಮೆ ಇನಿಯೋಡ ಉಲ್ಲಾಯ.
ಮಾಯಿದ ಪುಣ್ಣಮೆ ಮಾ ಯೋಡೇ ಪೋತುಂಡೇ.
ಸುಗ್ಗಿದ ಪುಣ್ಣಮೆ ಓಡಾದೇರೆ ಉಲ್ಲಾಯ.
ಕರುoಗೊಲು ಕನತುನು ಏರಂದು ಕೇoಡರ.
ಕರುಂಗೋಲು ಕನತುನ ಕಾನದ -ಕಟದೇರೆ.
ಶ್ರೀ ಕ್ಷೇತ್ರ ಸತ್ಯಸಾರಮಾನಿ ಕಾನದ -ಕಟದ ದೈವಸ್ಥಾನ ಗಾಳಿಗುಡ್ಡೆ ಶಿರ್ತಾಡಿಯಲ್ಲಿ ಮಾರ್ಚ್ 31ರಂದು ಕರುಂಗೋ ಲು ಕುಣಿತದ ಆಚರಣೆ ನಡೆಯಿತು.

ದೈವಸ್ಥಾನದ ಗೌರವ ಅಧ್ಯಕ್ಷರಾದ ಗೋಪಾಲ ಶಿರ್ತಾಡಿ, ಅಧ್ಯಕ್ಷರಾದ ರಮಾನಂದ ದಡ್ಡಲ್ಪಲ್ಕೆ,ಗುರಿಕಾರರಾದ ಸಂಜೀವ ಶಿರ್ತಾಡಿ, ಅರ್ಚಕರಾದ ಕರಿಯ ಹಾಗೂ ದೈವಸ್ಥಾನದ ಪದಾಧಿಕಾರಿಗಳ ನೇತ್ರತ್ವದಲ್ಲಿ ನಡೆಯಿತು. ರಾಕೇಶ್ ನಾರಾವಿ, ಸುದೀಪ್ ಶಿರ್ತಾಡಿ, ಸಂದೀಪ್ ಶಿರ್ತಾಡಿ, ಜಯ ಜೋಗೊಟ್ಟು ಇನ್ನಿತರರು ಸಹಕರಿಸಿದರು.

Related posts

ಕಾರ್ಕಳ: ಮುಡಾರು ಸೊಸೈಟಿಯಲ್ಲಿ ಕಳ್ಳತನಕ್ಕೆ ಯತ್ನ

Madhyama Bimba

ವರಂಗ: ಗೀತಾಂಜಲಿ ನಾಟಕ ಬಿಡುಗಡೆ, ಸಾಧಕರಿಗೆ ಸನ್ಮಾನ

Madhyama Bimba

ಜೆಇಇ ಬಿ. ಆರ್ಕ್ ಮತ್ತು ಬಿ. ಪ್ಲಾನಿಂಗ್ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ. ಬಿ ಪ್ಲಾನಿಂಗ್ ನಲ್ಲಿ ಜನರಲ್ ಇಡಬ್ಲ್ಯೂಎಸ್ ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More