ಕಾರ್ಕಳ

10ನೇ ವರ್ಷದ ಸಂಭ್ರಮದಲ್ಲಿ ಕಾರ್ಕಳದ ಶ್ರೀ ವಿಜಯಲಕ್ಷ್ಮೀ ಫ್ಯಾಬ್ರಿಕ್ಸ್-ದೀಪಾವಳಿಯ ಪ್ರಯುಕ್ತ ಲಕ್ಕಿ ಕೂಪನ್, ವಿಶಿಷ್ಟ ಬಹುಮಾನಗಳು

ಜವುಳಿ ಉದ್ಯಮದಲ್ಲಿ ಹೆಸರುವಾಸಿ ಗಳಿಸಿದ ಕಾರ್ಕಳ ಮಂಗಳೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿಯ ಶ್ರೀ ವಿಜಯಲಕ್ಷ್ಮೀ ಫ್ಯಾಬ್ರಿಕ್ಸ್ ಸಂಸ್ಥೆಯು 10ನೇ ವರ್ಷದ ಸಂಭ್ರಮದಲ್ಲಿದೆ. ಕಳೆದ 10 ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಹಾಗೂ ನವನವೀನ ಮಾದರಿಯ ಬಟ್ಟೆಗಳನ್ನು ನೀಡಿ ಗ್ರಾಹಕರನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ.


10 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ದೀಪಾವಳಿಯ ಹಬ್ಬದ ಖರೀದಿಗಾಗಿ ವಿವಿಧ ಬಹುಮಾನಗಳನ್ನು ಘೋಷಿಸಿದೆ.


ಪ್ರತೀ 999 ರೂ. ಖರೀದಿಗೆ ಒಂದು ಲಕ್ಕಿ ಕೂಪನ್ ಉಚಿತವಾಗಿ ನೀಡುತ್ತಿದೆ. ಲಕ್ಕಿ ಕೂಪನ್ ವಿಜೇತರಾದವರಿಗೆ ಪ್ರಥಮ ಎಲ್‌ಜಿ 32 ಇಂಚಿನ ಎಲ್‌ಇಡಿ ಟಿವಿ, ದ್ವಿತೀಯ ಗ್ರೈಂಡರ್, ತೃತೀಯ ಮಿಕ್ಸಿ ಹಾಗೂ 50 ಮಂದಿಗೆ ಸಮಾಧಾನಕರ ಬಹುಮಾನವನ್ನು ಉದ್ಯಮದ ಮಾಲಕರು ಘೋಷಿಸಿದ್ದಾರೆ. ನ. 4ರಂದು ಲಕ್ಕಿ ಕೂಪನ್ ಡ್ರಾ ನಡೆಯಲಿದೆ.


ದಶ ಸಂಭ್ರಮ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಇಲ್ಲಿ ನವನವೀನ ಮಾದರಿಯ ಬಟ್ಟೆಗಳು, ಗ್ರಾಹಕರ ಮನ ಸೆಳೆಯುವ ಜರಿ ಸೀರೆಗಳು ಫ್ಯಾನ್ಸಿ ಸೀರೆಗಳು, ಕಾಟನ್ ಸೀರೆಗಳು, ಮಹಿಳೆಯರ ಕುರ್ತಿಸ್, ಲೆಗ್ಗಿನ್ಸ್, ಪ್ಯಾಂಟ್, ಒಳ ಉಡುವುಗಳು, ಪುರುಷರ ಪ್ಯಾಂಟ್, ಶರ್ಟ್, ಟಿ-ಶರ್ಟ್, ಸೂಟಿಂಗ್ಸ್, ಶರ್ಟಿಂಗ್ಸ್ ಮಕ್ಕಳ ಸಿದ್ದ ಉಡುಪುಗಳು ಹಾಗೂ ನಿತ್ಯೋಪಯೋಗಿ ಜವುಳಿಗಳು ಇಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

Related posts

ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಅಧ್ಯಕ್ಷರ ಭೇಟಿ

Madhyama Bimba

ಕಾರ್ಕಳ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ- ಗಾಯ

Madhyama Bimba

ಕುಕ್ಕುಂದೂರು ಹಾಲು ಉತ್ಪಾದಕರ ಸಹಕಾರ ಸಂಘದ  ನೂತನ ಕಟ್ಟಡ ಗೋಕುಲ ಉದ್ಘಾಟನಾ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More