ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಇದರ ಸ್ವರ್ಣ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ 19ನೇ “ಸ್ವಚ್ಚ ವಿಚಾರ್ ” ಸಂವಾದ ಕಾರ್ಯಕ್ರಮವು ಜ. 22ರಂದು ಪ್ಲಾನೆಟ್ ಚಿತ್ರಮಂದಿರದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾದ ವಿಶ್ವಕರ್ಮ ಬ್ಯಾಂಕ್‌ನ ಅಧ್ಯಕ್ಷ ಡಾ| ಎಸ್. ಆರ್. ಹರೀಶ್ ಆಚಾರ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಅಂಬಾಮಹೇಶ್ವರಿ ಟ್ರಸ್ಟ್ ಜೆಪ್ಪು ಇದರ ಪ್ರಧಾನ ಕಾರ್ಯದರ್ಶಿ ಸಾಮಾಜಿಕ ಕಾರ್ಯಕರ್ತ ಉಮಾನಾಥ ಕೋಟೆಕಾರ್ “ಸ್ವಚ್ಛತೆ ಯಾಕೆ ಮತ್ತು ಹೇಗೆ…? ಸ್ವಚ್ಛತೆಯ ವಿಷಯದಲ್ಲಿ ಸಂಘ ಸಂಸ್ಥೆಗಳು ಪಾತ್ರ” ವಿಷಯಗಳನ್ನು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಪೆಲಿಕ್ಸ್ ವಾಸ್, ಪತ್ರಕರ್ತ ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ನ ಅಧ್ಯಕ್ಷ ರೋಟರಿಯನ್ ಭಾಸ್ಕರ್ ರೈ ಕಟ್ಟಾ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರರಾದ. ಪಿ.ರವಿ ಆಚಾರ್ಯ, ವ್ಯವಸ್ಥಾಪಕ ದಿನೇಶ್ ಆಚಾರ್ಯ, ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹಾಗೂ ಸದಸ್ಯರು ನಿವೃತ ಪ್ರಧ್ಯಾಪಕರಾದ ವಸಂತ. ಎಂ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಸದಸ್ಯರು, ಸರಕಾರಿ ಆಯುರ್ವೇದಿಕ್ ಡಿಸ್ಪ್ಲೇನ್ಸಾರಿ ಬೆಳಪು ಇದರ ವೈದ್ಯಧಿಕಾರಿ ಡಾ. ಮಾನಸ ಮುಗೇರಯ, ರಾಘವೇಂದ್ರ ಗೇಮ್ಸ್ ಕ್ಲಬ್ ನ ಶ್ರೀ ರಾಜೇಶ್, ನಿಂಜೂರ್ ವಿಶ್ವಕರ್ಮ ಸಂಘದ ಗೋಪಾಲ ಆಚಾರ್ಯ, ಬೈಲೂರು ವಿಶ್ವಕರ್ಮ ಸಂಘದ ವಾದಿರಾಜ ಆಚಾರ್ಯ, ಕಾರ್ಕಳ ಚಿನ್ನದ ಕೆಲಸಗಾರರ ಸಂಘದ ರತ್ನಾಕರ ಆಚಾರ್ಯ ಕಟ್ಟೆಮಾರ್, ರೆಂಜಾಳ ವಿಶ್ವಕರ್ಮ ಸಂಘದ ಶ್ರೀನಿವಾಸ ಆಚಾರ್ಯ, ಜೈನ್ ಮಿಲನ್‌ನ ಕೆ ಗುಣವರ್ಮ ಜೈನ್, ಶ್ರೀ ಕಾಳಿಕಾಂಭ ವಿಶ್ವಕರ್ಮ ಫೈನಾನ್ಸ್ ನ ಅಧ್ಯಕ್ಷ ಸುಧಾಕರ ಆಚಾರ್ಯ, ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಇದರ ಸ್ಥಾಪಕ ಅಧ್ಯಕ್ಷೆ ಶ್ರೀಮತಿ ಜ್ಯೋತಿ ರಮೇಶ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಇದರ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಶ್ರೀ ಕಾಳಿಕಾಂಬಾ ಡೆವಲಪ್‌ಮೆಂಟ್ ಟ್ರಸ್ಟ್‌ನ ಕಾರ್ಯದರ್ಶಿ ಶಿಲ್ಪಿ ಕೆ ಸತೀಶ್ ಆಚಾರ್ಯ, ಪುರಸಭೆ ಸದಸ್ಯೆ ಹಾಗೂ ವಿಶ್ವಕರ್ಮ ಮಹಿಳಾ ಸಮಿತಿಯ ಅಧ್ಯಕ್ಷೆ ನಳಿನಿ ವಿಜೇಂದ್ರ, ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಸಂಘ ದ ಜ್ಯೋತಿ ರವಿ, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಉಮರಬ್ಬ, ಮೂಡಬಿದ್ರೆ ಮಹಿಳಾ ಸಮಿತಿಯ ಗೀತಾ ಯೋಗೀಶ್, ಫೋಟೋಗ್ರಾಫರ ಅಸೋಸಿಯೇಷನ್‌ನ ಹರೀಶ್ ಪವರ್, ಭುವನೇಂದ್ರ ಕಾಲೇಜಿನ ಪ್ರಧ್ಯಾಪಕರಾದ ನಂದ ಕಿಶೋರ್, ಶಂಕರ ಕುಡ್ವ, ಪ್ರಕಾಶ್ ಹೋಟೆಲ್ ಮಾಲಕರದ ಹರಿ ಪ್ರಕಾಶ್ ಶೆಟ್ಟಿ, ಸಮಾಜ ಸೇವಕರದ ಸತೀಶ್, ವೇಸ್ಟರ್ನ್ ಕ್ರಿಕೆಟ್ ಕ್ಲಬ್‌ನ ಅಧ್ಯಕ್ಷರು ಸತೀಶ್ ಆಚಾರ್ಯ, ಧ್ವನಿ ಬೆಳಕು ಸಂಯೋಜಕರ ಸಂಘ ಕಾರ್ಕಳದ ಜೀವನ್ ವೈ ಸಭೆಯಲ್ಲಿ ಭಾಗವಹಿಸಿದರು.
ಶಾಖಾ ವ್ಯವಸ್ಥಾಪಕ ನಿತಿನ್ ಕಣ್ಣೂರ್ ಸ್ವಾಗತಿಸಿದರು. ಸಿಬ್ಬಂದಿ ಕಿರಣ್ ಆಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
