ಮೂಡುಬಿದಿರೆ

“ಸ್ವಚ್ಛ ಸರ್ವೇಕ್ಷಣೆ” ಸ್ವಚ್ಛತೆಯ ಸಮೀಕ್ಷೆ

 

ಮೂಡುಬಿದಿರೆ: ಸ್ವಚ್ಛ ಭಾರತ ಮಿಷನ್ (ನಗರ) – 2.0 ಯೋಜನೆಯ ಅನ್ವಯ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಪ್ರತೀ ವರ್ಷವೂ ದೇಶಾದ್ಯಂತ ಎಲ್ಲಾ ನಗರಗಳಲ್ಲಿ ನಡೆಸುವ ಸ್ವಚ್ಛತೆಯ ಸಮೀಕ್ಷೆ “ಸ್ವಚ್ಛ ಸರ್ವೇಕ್ಷಣೆ 2025-26 ರಲ್ಲಿ” ನಾಗರಿಕರ ಅಭಿಪ್ರಾಯ ನೀಡುವ ಅವಕಾಶ ಈಗ ಮೂಡುಬಿದಿರೆಯ ಎಲ್ಲಾ ನಾಗರಿಕರಿಗೆ ಲಭ್ಯವಿದೆ.

ಇದರ ಸದುಪಯೋಗವನ್ನು ಪಡೆದುಕೊಂಡು ಮೂಡುಬಿದಿರೆಯ ಎಲ್ಲಾ ಜನಸಾಮಾನ್ಯರು ತಕ್ಷಣವೇ ತಮ್ಮ ಸ್ಮಾರ್ಟ್ ಮೊಬೈಲ್ ನಿಂದ ಕೆಳಗಿನ QR ಕೋಡ್ ಸ್ಕ್ಯಾನ್ ಮಾಡುವ ಮುಖಾಂತರ ಅಥವಾ https://cf.sbmurban.org/ ವೆಬ್ ಲಿಂಕ್ ಬಳಸುವ ಮುಖಾಂತರ ಬಹುಆಯ್ಕೆಯ ಹಲವು ಸರಳ ಪ್ರಶ್ನೆಗಳನ್ನು ಕೇವಲ 2 ನಿಮಿಷಗಳ ಸಮಯದಲ್ಲಿ ಉತ್ತರಿಸಿ ಮೂಡುಬಿದಿರೆ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತಾದ ತಮ್ಮ ನೈಜ ಅಭಿಪ್ರಾಯವನ್ನು ದಾಖಲಿಸಿ, ಮೂಡುಬಿದಿರೆ ನಗರವನ್ನು ಸ್ವಚ್ಛತೆಯ ಮಾನದಂಡದಲ್ಲಿ ಮುಂಚೂಣಿಯಾಗಿಸಲು ಸಹಕರಿಸುವ ಅವಕಾಶವಿದೆ.

ಆದುದರಿಂದ ಈ ಅವಕಾಶವನ್ನು ಮೂಡುಬಿದಿರೆ ಪುರಸಭೆಯ ಎಲ್ಲಾ ನಾಗರಿಕರು ಕಡ್ಡಾಯವಾಗಿ ಬಳಸಿಕೊಂಡು ಪುರಸಭೆಗೆ ಸಹಕರಿಸುವಂತೆ ಹಾಗೂ ಇದರೊಂದಿಗೆ ಕಸವನ್ನು ಹಸಿ ಕಸ, ಒಣ ಕಸ, ಅಪಾಯಕಾರಿ ಕಸ, ಹಾನಿಕಾರಕ ಕಸವಾಗಿ ವಿಂಗಡಿಸುವುದು; ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಬಸ್ ನಿಲ್ದಾಣ, ಉದ್ಯಾನವನ, ಸಾರ್ವಜನಿಕ ಶೌಚಾಲಯ, ಧಾರ್ಮಿಕ ಕ್ಷೇತ್ರಗಳು, ಮನೆಯ ಪ್ರದೇಶಗಳು, ಇತರೆಡೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಂಡು; ಮನೆಯಿಂದಲೇ ಬಟ್ಟೆಯ ಚೀಲಗಳನ್ನು ತರುವ ಅಭ್ಯಾಸದೊಂದಿಗೆ ಭಾಗಿಯಾಗಲು ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಆಳ್ವಾಸ್‌ನ ಸಾಧ್ವಿ ಪಿ.ವಿ. ರಾಜ್ಯಕ್ಕೆ 4ನೇ ರ್‍ಯಾಂಕ್ 

Madhyama Bimba

  ಅಕ್ರಮ ಸಕ್ರಮ ಸಭೆ ನಡೆಸುವಂತೆ ವಾಸುದೇವ ನಾಯಕ್ ತಾಕೀತು

Madhyama Bimba

ಕಡಂದಲೆ ಉಳುವೆ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ 

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More