ಕಾರ್ಕಳ

ಕ್ಷತ್ರೀಯ ಮರಾಠ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ- 107 ವಿದ್ಯಾರ್ಥಿಗಳಿಗೆ 1.42 ಲಕ್ಷ ರೂ ವಿದ್ಯಾರ್ಥಿ ವೇತನ ಹಾಗೂ ಬ್ಯಾಗ್ ವಿತರಣೆ

ಕಾರ್ಕಳ: ಕ್ಷತ್ರೀಯ ಮರಾಠ ಸಮಾಜ ರಿ. ಕಾರ್ಕಳ ಇದರ ಆಶ್ರಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ  ನಡೆಯಿತು.

ಕ್ಷತ್ರೀಯ ಮಾರಾಠ ಸಮಾಜದ ಅದ್ಯಕ್ಷ ಶುಭದರಾವ್ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಉಮೇಶ್ ರಾವ್ ಉದ್ಘಾಟಿಸಿದರು.

ಎಸ್.ಎಸ್‌.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 8 ವಿದ್ಯಾರ್ಥಿಗಳನ್ನು ಶಾಲು, ಹಾರ, ಸ್ಮರಣಿಕೆ ಹಾಗೂ ಉಡುಗೊರೆ ನೀಡಿ ಸನ್ಮಾನಿಸಿ ಸಮಾಜದ ಇತರ 107 ವಿದ್ಯಾರ್ಥಿಗಳಿಗೆ 1.42 ಲ‌ಕ್ಷ‌ ರೂ ವಿದ್ಯಾರ್ಥಿ ವೇತನ ಮತ್ತು ಬ್ಯಾಗ್ ವಿತರಿಸಿ ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ್ ಗಿರೀಶ್ ರಾವ್, ಕೆ.ಕೆ.ಎಮ್‌.ಪಿ. ತಾಲೂಕು‌ ಘಟಕದ ಅದ್ಯಕ್ಷ ಕೀರ್ತನ್ ಲಾಡ್, ಸಮಾಜ ಮುಂದಾಳು ರಮಾನಾಥ್ ರಾವ್ ಜೋಡುಕಟ್ಟೆ, ಸಿ.ಎ. ಹರೀಶ್ ಮೋರೆ, ಶಿಕ್ಷಕಿ ಲಕ್ಷ್ಮೀ ಸಂದರ್ಭೋಚಿತ ‌ಮಾತುಗಳನ್ನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು,‌ ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾದ್ಯಕ್ಷರಾದ ಶೇಖರ್ ರಾವ್, ಉದ್ಯಮಿ ನವೀನ್ ರಾವ್ ಕಾಳಿಕಾಂಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಾನಿಗಳಾದ ಸತ್ಯಾರ್ಥಿ ರಾವ್ ಸಾಣೂರು ಹಾಗೂ ಸಂತೋಷ್ ರಾವ್ ಜೋಡುರಸ್ತೆ ಇವರನ್ನು ಗೌರವಿಸಲಾಯಿತು

ಶಿಕ್ಷಕಿ‌ಯರಾದ ದಿವ್ಯಾ ಹರೇಂದ್ರ ಸ್ವಾಗತಿಸಿ ಆಶಾಲತಾ ಗಿರೀಶ್ ವಿದ್ಯಾರ್ಥಿಗಳ ವಿವರ ವಾಚಿಸಿದರು, ಕಾರ್ಯದರ್ಶಿ ಪ್ರಸನ್ನ ರಾವ್ ಧನ್ಯವಾದವಿತ್ತು ಶಿಕ್ಷಕ ಹರೇಂದ್ರ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಬಾಲ್ಯ ವಿವಾಹ ಶೂನ್ಯ ಸಹಿಷ್ಣುತೆ ಹೊಂದಿರುವ ಗ್ರಾಮ ಪಂಚಾಯತ್‌ಗಳಿಗೆ ಪ್ರಶಸ್ತಿ: ಪ್ರಸ್ತಾವನೆ ಆಹ್ವಾನ

Madhyama Bimba

ಉಚಿತ ಕೌಶಲ್ಯ ತರಬೇತಿ: ಅರ್ಜಿ ಆಹ್ವಾನ

Madhyama Bimba

ಕಬ್ಬಿನಾಲೆಯಲ್ಲಿ ಹೆಚ್ಚಿದ ಆನೆ ಹಾವಳಿ- ಭಯದಿಂದ ಮನೆ ಬಿಟ್ಟು ಹೋದ ಕುಟುಂಬ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More