ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಪುನಃ ಪ್ರತಿಷ್ಠಾ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮೇ. 13 ಬುಧವಾರದಿಂದ ಮೇ. 14ಗುರುವಾರದವರೆಗೆ ಜರಗಲಿದೆ.
ಮೇ. 13ರಂದು ಬೆಳಿಗ್ಗೆ 8.00 ರಿಂದ: ಗಣಪತಿ ಪೂಜೆ, ಶುದ್ಧ ಪುಣ್ಯಾಹ, ಅದ್ಯ ಗಣಪತಿ ಹೋಮ, ನಾಗ ಬ್ರಹ್ಮ ದೇವರಿಗೆ ನವಕ ಪ್ರಧಾನ ಹೋಮ, ಕಲಶಾಭಿಷೇಕ ಪೂಜೆ, ಪರಿವಾರ ದೈವಗಳಿಗೆ ಅನುಜ್ಞಾ ಕಲಶ ಅಭಿಷೇಕ ಪೂಜೆ, ಬ್ರಹ್ಮ ಪರಿವಾರ ದೇವರ ಕಲಾ ಸಂಕೋಚ, ಸಂಜೆ 4.00 ರಿಂದ: ಗಣಪತಿ ಪೂಜೆ, ಗೇಹ ಪ್ರತಿಗ್ರಹ, ವಾಸ್ತು ಹೋಮ, ವಾಸ್ತುಬಲಿ, ದಿಕ್ ಬಲಿ, 108 ಕಲಶ ಮಂಡಲ ರಚನೆ, ಪರಿವಾರ ದೇವರ ಅಧಿವಾಸ ಪೂಜೆ, ಅಧಿವಾಸ ಹೋಮ, ಬ್ರಹ್ಮ ಪರಿವಾರ ದೇವರ ಅಧಿವಾಸ ಪೂಜೆ, ಅಧಿವಾಸ ಹೋಮ, ಪರಿವಾರ ದೈವಗಳ ಪ್ರತಿಷ್ಠೆ ಜೀವಕುಂಭ ಸೇಚನ, ಅಧಿವಾಸ ಕಲಶಾಭಿಷೇಕ, ನವಕ ಪ್ರಧಾನ ಕಲಶ, ಹೋಮ, ಕಲಶಾಭಿಷೇಕ ಪೂಜೆ, ಅಷ್ಟೋತ್ತರ ಪರಿಕರ ಕುಂಭಪೂರ್ವಕ ಬ್ರಹ್ಮಕುಂಭ ಸ್ಥಾಪನೆ, ಶ್ಯಯ್ಯಾಕಲ್ಪನೆ ಪೂಜೆ ನಡೆಯಲಿದೆ. ಸಂಜೆ 6.00 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 7.00ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.00 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8.30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ 9.00 ರಿಂದ ಯಕ್ಷಗಾನ ಕಾರ್ಯಕಮ ಜರಗಲಿದೆ.
ಮೇ. 14ರಂದು ಬೆಳಿಗ್ಗೆ 8.00 ರಿಂದ ಗುರು ಗಣಪತಿ ಪೂಜೆ, ಶುದ್ಧ ಪುಣ್ಯಾಹ ತತ್ವ ಕಲಶ ಸ್ಥಾಪನೆ, ಬೆಳಿಗ್ಗೆ 9.05 ಕ್ಕೆ ಒದಗುವ ಮಿಥುನ ಲಗ್ನ ಸುಮೂರ್ತದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾಪನೆ, ಜೀವಕುಂಭ ಸೇಚನ, ನ್ಯಾಸಾದಿಪೂರ್ವಕ ಪ್ರತಿಷ್ಠಾ ಕಲಶಾಭಿಷೇಕ, ತತ್ವ ಹೋಮ, ಪ್ರಧಾನ ಹೋಮ, 108 ಕಲಶಾಭಿಷೇಕ, ನೂತನ ಶಿಲಾಮಯ ಗರ್ಭಗುಡಿಯ ಲೋಕಾರ್ಪಣೆ, ಬೆಳಿಗ್ಗೆ 10.30 ಕ್ಕೆ ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ. 11.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 6.00 ರಿಂದ ರಂಗಪೂಜಾ ಉತ್ಸವ, ಡಮರು ಸೇವೆ, ಮಹಾಪ್ರಸಾದ ವಿತರಣೆ ಜರಗಲಿದೆ.
