ಕಾರ್ಕಳ

ಈದು -ನಾರಾವಿ ಪರಸ್ಪರ ಸೇವಾ ಟ್ರಸ್ಟ್ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಒಂದು ಲಕ್ಷ ರೂಪಾಯಿ ಸಹಾಯ ಧನ ಹಸ್ತಾಂತರ

ಪರಸ್ಪರ ಸೇವಾ ಟ್ರಸ್ಟ್ (ರಿ)ಈದು -ನಾರಾವಿ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಆಚಾರ್ಯ ಇವರು ಒಂದು ತಿಂಗಳ ಹಿಂದೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮನೆಯ ಮಾಡಿನಿಂದ ಕೆಳಗೆ ಬಿದ್ದು ಸೊಂಟ ಕಾಲುಗಳಿಗೆ ಗಂಭೀರ ಗಾಯವಾಗಿ ಮಂಗಳೂರಿನ ಎ.ಜೆ ಹಾಸ್ಪಿಟಲ್ ನಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.


ಸಂತೋಷ್ ಆಚಾರ್ಯ ಅವರು ಕಡು ಬಡತನದಿಂದ ವಯಸ್ಸಾದ ತಂದೆ ತಾಯಿ ತನ್ನ ಎರಡು ವರ್ಷದ ಮಗು ಮತ್ತು ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದು ಮನೆಗೆ ಆದರ ಸ್ತಂಭವಾಗಿದ್ದ ಸಂತೋಷ್ ಈ ಆಕಸ್ಮಿಕ ಅವಘಡದಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.


ಈ ಕಷ್ಟದ ಸಮಯವನ್ನು ತಿಳಿದ ಪರಸ್ಪರ ಸೇವಾ ಟ್ರಸ್ಟ್ ನ ಕಾರ್ಯಕರ್ತರು ಊರಿನವರ ಸಹಕಾರದಿಂದ ಒಂದು ಲಕ್ಷದ ಸಹಾಯಧನವನ್ನು ನೀಡಿದ್ದಾರೆ.

Related posts

ಹೆಬ್ರಿ: ಚೈತನ್ಯ ಯುವ ವೃಂದ ವತಿಯಿಂದ ಕ್ರಿಕೆಟ್ ಪಂದ್ಯಾಟ ಚೈತನ್ಯ ಟ್ರೋಫಿ-2026

Madhyama Bimba

ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಶಾಲೆಯ ಬಾವಿ ಸ್ವಚ್ಛತೆ

Madhyama Bimba

ಕೆಜಿಟಿಟಿಐ ಉಚಿತ ಕೌಶಲ್ಯ ತರಬೇತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More