ಕಾರ್ಕಳಹೆಬ್ರಿ

ಸಂಸ್ಕಾರಸುಧಾ ಬೇಸಿಗೆ ಶಿಬಿರ ಸಂಪನ್ನ

ಹೆಬ್ರಿ : ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠ, ಶ್ರಿಂಗೇರಿ ಬಾಲಭಾರತಿ ಇವರ ಆಶ್ರಯದಲ್ಲಿ ರಾಪಿಡ್ ಇನ್ಸ್ಟಿಟ್ಯೂಟ್ ಆಫ್ ಅಬಾಕಸ್ ಹೆಬ್ರಿ ಇದರ ಮುಖ್ಯಸ್ಥೆ ಸುನೀತಾ ಹೆಬ್ಬಾರ್ ಇವರ ನೇತೃತ್ವದಲ್ಲಿ ಸುಮಾರು ಏಳು ದಿನ ಕಬ್ಬಿನಾಲೆ ಶ್ರೀ ಲಕ್ಷ್ಮೀನಾರಾಯಣ ಸಭಾಂಗಣದಲ್ಲಿ ನಡೆದ ಸಂಸ್ಕಾರಸುಧಾ ಬೇಸಿಗೆ ಶಿಬಿರವು ಮೇ.10 ರಂದು ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮವಾಹಕ ವರಂಗ ರಾಮಚಂದ್ರ ಭಟ್ ವಹಿಸಿದ್ದರು.

ಕಬ್ಬಿನಾಲೆ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀಧರ ಹೆಬ್ಬಾರ್, ಪಂಚಾಯತ್ ರಾಜ್ ರಾಜ್ಯ ಸಂಪನ್ಮೂಲ ವ್ಯಕ್ತಿ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್, ದೇವಸ್ಥಾನದ ವ್ಯವಸ್ಥಾಪಕ ಪರಮೇಶ್ವರ ಹೆಬ್ಬಾರ್, ಸುಳಿಗೋಡು ಜಯಂತ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶಿಬಿರದ ಯಶಸ್ಸಿಗೆ ಸಹಕರಿಸಿದ ಆಶಾ, ವಿದ್ಯಾ, ರಕ್ಷಿತಾ, ಅನಿತಾ ಮಾತಾಜಿ ಇವರನ್ನು ಅಭಿನಂದಿಸಲಾಯಿತು.

ಸ್ಥಳೀಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಆಯೋಜಕರಾದ ಸುನೀತಾ ಹೆಬ್ಬಾರ್ ಸ್ವಾಗತಿಸಿದರು. ಅನಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಕಾರ್ಕಳ: ಬ್ಯಾರಿಕೇಡ್ ಹಸ್ತಾಂತರ

Madhyama Bimba

ಕರಾಟೆ ಚಾಂಪಿಯನ್ ಶಿಪ್: ಎಸ್‌ವಿಟಿ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಬಹುಮಾನ

Madhyama Bimba

ಡಾ| ಅರುಣ್ ಉಳ್ಳಾಲ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿರುವುದು ಖಂಡನೀಯ: ರಮಿತಾ ಶೈಲೇಂದ್ರ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More