ಮೂಡುಬಿದಿರೆ

ಮೂಡುಬಿದಿರೆಯಲ್ಲಿ ‘ಜೀವೀಸ್ ಸಿಲ್ಕ್ & ಸೇಜ್’

ಮಹಿಳೆಯರಿಗೆ ಇಷ್ಟವಾಗುವ ರೀತಿಯ ಸೀರೆ ಸೇರಿದಂತೆ ವಿವಿಧ ವಿನ್ಯಾಸದ ಉಡುಪುಗಳ ಮಳಿಗೆ ‘ಜೀವೀಸ್ ಸಿಲ್ಕ್ & ಸೇಜ್’ ಮೂಡುಬಿದಿರೆ ಆಳ್ವಾಸ್ ರಸ್ತೆಯ ಮಿನೇಜಸ್ ಕಾಂಪ್ಲೆಕ್ಸ್ ನಲ್ಲಿ ಇಂದು ನೂತನವಾಗಿ ಪ್ರಾರಂಭಗೊಂಡಿತು.

ಮಹಿಳೆಯರ ಉಡುಪುಗಳ ಈ ಮಳಿಗೆಯನ್ನು ಆಳ್ವಾಸ್ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಮೋಹನ ಆಳ್ವ ಅವರು ಉದ್ಘಾಟಿಸಿದರು. ಮಹಿಳೆಯರಿಗೆ ಇಷ್ಟವಾಗುವ ಬಟ್ಟೆಗಳು ಸುಲಭ ರೀತಿಯಲ್ಲಿ ಸಿಗುವಂತಾಗಲಿ ಎಂದು ಶುಭ ಹಾರೈಸಿದರು.

ನಿಶ್ಮಿತಾ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣ ಪಿ.ಎಂ, ಮೀನಾಕ್ಷಿ ನಾರಾಯಣ್, ಆಳ್ವಾಸ್ ನ ಡಾ‌.ಗ್ರೀಷ್ಮಾ ವಿವೇಕ್ ಆಳ್ವ, ವೈದ್ಯೆ ಡಾ.ಮಮತಾ ಗುರುಪ್ರಸಾದ್, ನ್ಯಾಯವಾದಿ ಶ್ವೇತಾ ಜೈನ್, ಗುರುನಾರಾಯಣ ಸ್ವಾಮಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸವಿತಾ ದಿನೇಶ್, ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶೆಟ್ಟಿ, ಕಾಳಿಕಾ ಡಿಜಿಟಲ್ಸ್ ಮಾಲಕಿ ಶಾಂತಲಾ ಸೀತಾರಾಮ ಆಚಾರ್ಯ , ಲಯನ್ ಜಗದೀಶ್ಚಂದ್ರ ಡಿ.ಕೆ, ಯುವವಾಹಿನಿ ಮೂಡುಬಿದಿರೆ ಘಟಕ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಶಂಕರ್ ಕೋಟ್ಯಾನ್ ಮೂಡುಕೊಣಾಜೆ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಮಾಲಕಿ ಜೀವಿತಾ ಶಂಕರ್ ಹಾಗೂ ಶಂಕರ್ ಎ.ಕೋಟ್ಯಾನ್ ಅವರು ಸರ್ವರನ್ನು ಸ್ವಾಗತಿಸಿ ಯಶಸ್ಸಿಗೆ ಸಹಕಾರ ಕೋರಿದರು.

ಪೂರ್ಣಿಮ ಕೋಟ್ಯಾನ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

Related posts

ಎಸ್ ಎಸ್ ಎಲ್ ಸಿ ಸಾಧಕಿಗೆ ಸನ್ಮಾನ

Madhyama Bimba

ಯುವವಾಹಿನಿ ನೇತೃತ್ವದಲ್ಲಿ ಒಂದು ವಾರದ ಉಚಿತ ಬೇಸಿಗೆ ಶಿಬಿರ

Madhyama Bimba

ದಿಶಾ ಪೂಜಾರಿ, ಅಗ್ನಿವೀರ್ ವಿರಾಜ್ ಪೂಜಾರಿಗೆ ಸಂಸದರಿಂದ ಸಮ್ಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More