ಕಾರ್ಕಳಹೆಬ್ರಿ

ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಆರೋಪ : ಹೆಬ್ರಿ ತಾಲ್ಲೂಕು ಕಚೇರಿ ವಿರುದ್ಧ ಪ್ರತಿಭಟನೆ

ಹೆಬ್ರಿ : ನಾವು ನಿರಂತರವಾಗಿ ಹೋರಾಟ ಮಾಡಿ ತಾಲ್ಲೂಕು ಮಾಡಿಸಿದ್ದೇವೆ. ಆದರೆ ಈಗ ಅದೇ ನಮ್ಮ ತಾಲ್ಲೂಕಿನಲ್ಲಿ ನಮ್ಮ ಜನರ ಕೆಲಸಗಳಿಗೆ ಅಲೆದಾಡಬೇಕಾಗಿದೆ. ಕೆಳಹಂತದ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರನ್ನು ನಿರ್ಲಕ್ಷ್ಯ ಮಾಡಿ ಕಚೇರಿ ಕೆಲಸಗಳಿಗೆ ಅಲೆದಾಡಿಸಿ ವಿಳಂಬ ಮಾಡುತ್ತಿದ್ದಾರೆ. ಜನರ ಕೆಲಸಗಳನ್ನು ಶೀಘ್ರವಾಗಿ ಮಾಡಿಸಿಕೊಡಿ ಎಂದು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್
ಅಧ್ಯಕ್ಷರಾದ ಸಾಮಾಜಿಕ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದರು.


ಅವರು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ವತಿಯಿಂದ ಹೆಬ್ರಿ ತಾಲ್ಲೂಕು ಕಚೇರಿ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಜನತೆಗೆ ಸಿಗುವ ಸೌಲಭ್ಯಗಳನ್ನು ಆದ್ಯತೆಯಲ್ಲಿ ನೀಡಿ, ಜನರ ಕಡತಗಳನ್ನು ವಿಲೇವಾರಿ ಮಾಡಿ, ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯವನ್ನು ಕೂಡಲೇ ಮುಗಿಸಿದಾಗ ಅಕ್ರಮಸಕ್ರಮ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ, ಜನರಿಗೆ ಸಹಾಯ ಮಾಡಿ ಕೆಲಸ ಮಾಡಿ, ನೌಕರರ ಅಸಹಕಾರದಿಂದ ತಾಲ್ಲೂಕು ಆಡಳಿತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು.


ಅಕ್ರಮಸಕ್ರಮ ಸಮಿತಿಯ ಮೀಟಿಂಗ್ ನಡೆಸಿ ಹಕ್ಕುಪತ್ರಗಳನ್ನು ನೀಡಲು ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಎಂದು ಅಕ್ರಮಸಕ್ರಮ ಸಮಿತಿಯ ಸದಸ್ಯ ನವೀನ್ ಕೆ ಅಡ್ಯಂತಾಯ ಹೇಳಿದರು.

ಹೆಬ್ರಿ ಬಿಜೆಪಿ ಶಕ್ತಿಕೇಂದ್ರವು ಪ್ರತಿಭಟನೆಗೆ ಬೆಂಬಲ ನೀಡಿ ಭಾಗವಹಿಸಿದ್ದರು. ಪ್ರತಿಭಟನೆಯ ಸಮಯದಲ್ಲಿ ಅರ್ಜಿ ಹಿಡಿದುಕೊಂಡು ಬಂದ ಹಲವರನ್ನು ತಹಶೀಲ್ಧಾರ್ ಎಸ್.ಎ.ಪ್ರಸಾದ್ ತನ್ನ ಕೊಠಡಿಗೆ ಕರೆಸಿಕೊಂಡು ಅಧಿಕಾರಿಗಳನ್ನು ಕರೆಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಟ್ಟರು.

ಗುರಿ ನಿಗದಿ ಮಾಡಿ ಕೊಂಡು ಎಲ್ಲಾ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವುದು, ಜನರ ಕೆಲಸಗಳಿಗೆ ನಿರ್ಲಕ್ಷ್ಯ ಮಾಡದಂತೆ ತಹಶೀಲ್ಧಾರ್ ಪ್ರಸಾದ್ ಎಸ್.ಎ ಕೆಳಹಂತದ ಅಧಿಕಾರಿಗಳು ಸಿಬ್ಬಂದ್ಧಿಗಳಿಗೆ ಸೂಚಿಸಿ ಸಾರ್ವಜನಿಕರಿಂದ ಯಾವೂದೇ ದೂರುಗಳು ಬರದಂತೆ ಕರ್ತವ್ಯ ಮಾಡಿ ಎಂದು ಆದೇಶಿಸಿದರು.

ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಟ್ರಸ್ಟ್ ಪದಾಧಿಕಾರಿಗಳು, ಮುಖಂಡರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ವಾದಿರಾಜ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್, ಕಿರಣ್ ತೋಳಾರ್, ಭೋಜ ಕುಲಾಲ್, ಎಚ್. ಜನಾರ್ಧನ್, ಅಣ್ಣಪ್ಪ ಕುಲಾಲ್, ಮುರ್ಸಾಲು ಮೋಹನದಾಸ ನಾಯಕ್, ಶಶಿಕಲಾ ಡಿ.ಪೂಜಾರಿ ಮುದ್ರಾಡಿ, ಸಂತೋಷ ನಾಯಕ್ ಕನ್ಯಾನ, ನಿತೀಶ್ ಎಸ್ ಪಿ, ಹರೀಶ ಶೆಟ್ಟಿ ನಾಡ್ಪಾಲು, ಬಿಜೆಪಿ ಹೆಬ್ರಿ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ಕಾರ್ಕಳ ಮಂಡಲದ ಪ್ರಧಾನ ಕಾರ್ಯದರ್ಶಿ ಶಿವಪುರ ಸುರೇಶ ಶೆಟ್ಟಿ, ಬಿಜೆಪಿ ಪ್ರಮುಖರಾದ ಜ್ಯೋತಿ ಹರೀಶ ಪೂಜಾರಿ, ಅಮೃತ್ ಕುಮಾರ್ ಶೆಟ್ಟಿ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಸುಧಾಕರ ಹೆಗ್ಡೆ, ರಮೇಶ ಕುಮಾರ್ ಶಿವಪುರ ಸೇರಿದಂತೆ ವಿವಿಧ ಪ್ರಮುಖರು, ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಆದ್ಯತೆಯಲ್ಲಿ ಜನರ ಕೆಲಸ ಮಾಡುತ್ತಿದ್ದೇವೆ : ತಹಶೀಲ್ಧಾರ್ ಪ್ರಸಾದ್
ಹೆಬ್ರಿ ತಾಲ್ಲೂಕು ಕಚೇರಿಯಲ್ಲಿರುವ ಸಿಬ್ಬಂದ್ಧಿ ಕೊರತೆಯ ನಡುವೆಯೂ ಇರುವ ಅಧಿಕಾರಿ ನೌಕರರ ಮೂಲಕ ಜನರ ಕೆಲಸಗಳನ್ನು ಮಾಡಿಕೊಡುತ್ತಿದ್ದೇವೆ. ಅರ್ಹ ಅರ್ಜಿಗಳನ್ನು ಹಂತಹಂತವಾಗಿ ಮಾಡುತ್ತಿದ್ದೇವೆ. ಸರ್ಕಾರ ಗುರಿ ನಿಗದಿ ಪಡಿಸಿದ ಎಲ್ಲಾ ಕೆಲಸಗಳ ನಡುವೆಯೂ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೆ ಕಾರ್ಯವನ್ನು ನಡೆಸುತ್ತಿದ್ದೇವೆ. ಅದು ಕೂಡ ಶೀಘ್ರವಾಗಿ ಮುಕ್ತಾಯಗೊಳ್ಳಲಿದೆ. ಜನರ ಕೆಲಸಗಳಿಗೆ ಯಾವೂದೇ ವಿಳಂಬ ಮಾಡಲ್ಲ. ಆದ್ಯತೆಯಲ್ಲಿ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಮನವಿ ಸ್ವೀಕರಿಸಿ ಹೆಬ್ರಿ ತಹಶೀಲ್ಧಾರ್ ಎಸ್.ಎ. ಪ್ರಸಾದ್ ಹೇಳಿದರು.
ಚಿತ್ರ: ಪ್ರತಿಭಟನೆ

Related posts

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ: ಬಿ ಎಲ್ ಸಂತೋಷ್

Madhyama Bimba

ಕುಕ್ಕುಂದೂರಿನ ಮೇಲ್ಜಡ್ಡು ನಿವಾಸಿ ಜಯಂತಿ ಆಚಾರ್ಯರ ಮನೆಗೆ ವಿಶ್ವಕರ್ಮ ಸಂಘಟನೆಗಳ ಭೇಟಿ

Madhyama Bimba

ಕಾರ್ಕಳ: ವಿಷ ಸೇವನೆ- ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More