ಮೂಡುಬಿದಿರೆ

ಬೆಳುವಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅಫಘಾತ

ಕಾರ್ಕಳ – ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳುವಾಯಿಯ ಕಾಂತಾವರ ಕ್ರಾಸ್ ಬಳಿ ಬಸ್ ಹಾಗೂ ಕಾರು ನಡುವೆ ಇಂದು ಅಫಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ತಿಂಗಳಿನಿಂದ ನಡೆಯುತ್ತಿರುವ ಅಫಘಾತಗಳಲ್ಲಿ ಈ ಪ್ರಕರಣವು ಸೇರಿದಂತಾಗಿದೆ.

ಕಾಂತಾವರ ಕ್ರಾಸ್ ನಲ್ಲಿ ಬುಧವಾರದಿಂದ ಬಂದ್ ಮಾಡಲಾದ ನಂತರ ರಸ್ತೆಯ ಅವ್ಯವಸ್ಥಿತ ಚಾಲನೆಯಿಂದಾಗಿ ಅಫಘಾತ ಹೆಚ್ಚಾಗುವ ಮುನ್ಸೂಚನೆ ಕಂಡು ಬಂದಿದೆ. ಕಾಂತಾವರ ಕಡೆಯಿಂದ ಬರುವ ವಾಹನಗಳು ಮೂಡುಬಿದಿರೆ ಕಡೆಗೆ ಸಾಗಬೇಕಾದರೆ ಕಾರ್ಕಳ ಕಡೆ ತಿರುಗಿ ಚಿಲಿಂಬಿ ಬಳಿ ಯು ಟರ್ನ್ ಪಡೆದು ಬೆಳುವಾಯಿ ಬಂದು ಮುಂದೆ ಸಾಗಬೇಕಾಗಿದೆ.

ರಸ್ತೆ ವೇಗದ ಚಾಲನೆಗೆ ಸಿದ್ಧಗೊಂಡ ನಂತರ ಅಫಘಾತಕ್ಕೆ ಮತ್ತೆ ಹೊಸ ಕಾರಣಗಳು ಗೋಚರಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನ ನಿತ್ಯ ನಿಯಮಾವಳಿಗಳಲ್ಲಿ ಬದಲಾವಣೆ ಮಾಡುತ್ತಿರುವುದರಿಂದ, ಸಂಚಾರಕ್ಕೆ ಹೊಸ ದಾರಿ ನೀಡುತ್ತಿರುವುದರಿಂದ ವಾಹನ ಸವಾರರು ದಿಕ್ಕು ತೋಚದಂತಾಗಿದ್ದಾರೆ.

Related posts

  ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ರಿಗೆ ಭಾರತ್ ರತ್ನ ಡಾ ಎ ಪಿ ಜೆ ಅಬ್ದುಲ್ ಕಲಾಂ ಎಜುಕೇಶನ್ ಎಕ್ಷಲೆನ್ಸ್ ಅವಾರ್ಡ್

Madhyama Bimba

  ಕಂಡಕ್ಟರ್ ಪ್ರಾಮಾಣಿಕತೆ- ಚಿನ್ನದ ಸರ ವಾರಸುದಾರರ ಮಡಿಲಿಗೆ

Madhyama Bimba

ಮೂಡುಬಿದಿರೆಯ ನಿತೀಶ್ ಕಾಮತ್ ಸಿ.ಎ. ತೇರ್ಗಡೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More