ಕಾರ್ಕಳಹೆಬ್ರಿ

ಕಾರ್ಕಳ: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಮದ್ಯವ್ಯಸನಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿ ದಾರಿ ಮಧ್ಯೆ ಮೃತಪಟ್ಟ ಘಟನೆ ಮೇ. 28ರಂದು ನಡೆದಿದೆ.

ಕಾರ್ಕಳ ತೆಳ್ಳಾರಿನ ಯತೀಶ ಆಚಾರ್ಯ (೪೧) ಮೃತಪಟ್ಟವರು.

ಇವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ಅಲ್ಲದೆ ಸುಮಾರು 10 ವರ್ಷದ ಹಿಂದೆ ಕಿಡ್ನಿ ಮತ್ತು ಲಿವರ್ ಸಮಸ್ಯೆಯ ಬಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ 8 ತಿಂಗಳ ತನಕ ಚಿಕಿತ್ಸೆಗೆ ದಾಖಲಾಗಿದ್ದು, ಆ ಸಮಯದಲ್ಲಿ ಮದ್ಯ ಸೇವನೆಯನ್ನು ಮಾಡಬಾರದೆಂದು ವೈದ್ಯರು ತಿಳಿಸಿದ್ದರೂ, ಮದ್ಯಪಾನ ಮಾಡುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರು ಪರೀಕ್ಷಿಸಿ ಯತೀಶ್ ಆಚಾರ್ಯರವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ನೀರೆ ಗ್ರಾಮ ಪಂಚಾಯತ್‌ನಲ್ಲಿ ಸವಲತ್ತು ವಿತರಣಾ ಕಾರ್ಯಕ್ರಮ

Madhyama Bimba

ಮುದ್ರಾಡಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ

Madhyama Bimba

ಪಡುಕುಡೂರಿನಿಂದ ಸಿರಿಬೈಲು ದೇವಸ್ಥಾನಕ್ಕೆ ಪಾದಯಾತ್ರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More