ಕಾರ್ಕಳಹೆಬ್ರಿ

ಕಾರ್ಕಳ: ನದಿಗೆ ಕಾಲು ಜಾರಿ ಬಿದ್ದು ಮೃತ್ಯು

ಕಾರ್ಕಳ: ವ್ಯಕ್ತಿಯೋರ್ವರು ನದಿಗೆ ಕಾಲು ಜಾರಿಬಿದ್ದು ಮೃತ್ಯುವಿಗೀಡಾದ ಘಟನೆ ವರದಿಯಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ನಿವಾಸಿ ಇಷಾನ್ ಪಾಶಾ (40) ಮೃತಪಟ್ಟವರು.

ಇಷಾನ್ ಪಾಶಾರವರು 7 ತಿಂಗಳ ಹಿಂದೆ ಶಮೀನ್ ಎಂಬುವವರನ್ನು ಮದುವೆಯಾಗಿ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಮದ್ಯಪಾನದ ಅಭ್ಯಾಸವಿದ್ದು, ಮೇ. 25ರಂದು ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಮೇ. 28ರಂದು ಜಾರಿಗೆಕಟ್ಟೆ ಶೆಟ್ಟಿಬೆಟ್ಟು ಎಂಬಲ್ಲಿ ಅವರ ಮನೆಯ ಹತ್ತಿರ ಇರುವ ಶಾಂಭವಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುತ್ತಾರೆ. ಮೃತರು ಶಾಂಭವಿ ನದಿಗೆ ಕಾಲುಜಾರಿ ಬಿದ್ದು ಅಥವಾ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಹೆಬ್ರಿ: ವಿಶ್ವ ಪರಿಸರ ದಿನಾಚರಣೆ

Madhyama Bimba

ಕುಕ್ಕುಂದೂರು ಫ್ರೆಂಡ್ಸ್ ವತಿಯಿಂದ ಶಾಲೆಯ ಬಾವಿ ಸ್ವಚ್ಛತೆ

Madhyama Bimba

ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ವಿಶ್ವ ಸುರಕ್ಷತಾ ದಿನಾಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More