ಕಾರ್ಕಳ

ಕರಾಟೆಯಲ್ಲಿ ಸಾಧನೆಗೈದ ನಿಟ್ಟೆಯ ಅವಳಿ ಸಹೋದರರಿಗೆ ‘ಯುವ ಸಾಧಕ’ ಬಿರುದು

ಕಾರ್ಕಳ: ಕರಾಟೆಯಲ್ಲಿ ಅಪ್ರತಿಮ ಸಾಧನೆಗೈದ ನಿಟ್ಟೆಯ ಅವಳಿ ಸಹೋದರರಾದ ಅನುಷ್ ಅರುಣ್ ಕೆ. ಹಾಗೂ ಆಯುಷ್ ಅರುಣ್ ಗೆ ಯುವ ಸಾಧಕ ಬಿರುದು ನೀಡಿ ಗೌರವಿಸಲಾಯಿತು.

ಕಾರ್ಕಳ ತೆಲಿಕೆದ ತೆನಾಲಿ ತಂಡದ ವತಿಯಿಂದ ತೆಲಿಕೆದ ಸಂಭ್ರಮ-2026 ಸಮಾರೋಪ ಕಾರ್ಯಕ್ರಮದಲ್ಲಿ ಈ ಬಿರುದು ನೀಡಿ ಗೌರವಿಸಲಾಯಿತು.

ಚಿಕ್ಕ ವಯಸ್ಸಿನಲ್ಲಿಯೇ ಕರಾಟೆಯಲ್ಲಿ ಅದ್ಭುತ ಸಾಧನೆ ಮಾಡಿರುವ ನಿಟ್ಟೆಯ ಅನುಷ್ ಅರುಣ್ ಕೆ. ಹಾಗೂ ಆಯುಷ್ ಅರುಣ್ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇವರು ನಿಟ್ಟೆಯ ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಮತ್ತು ಸಂಗೀತಾ ದಂಪತಿಗಳ ಪುತ್ರರಾಗಿದ್ದಾರೆ.

ವೇದಿಕೆಯಲ್ಲಿ ಬಾಲಾಜಿ ಮೊಬೈಲ್ಸ್ ನ ಪ್ರಶಾಂತ್ ಶೆಣೈ, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ವೃಷಭರಾಜ್ ಕದಂಬ, ದಿನೇಶ್ ಪ್ರಭು ಕಲ್ಲೊಟ್ಟೆ ಉಪಸ್ಥಿತರಿದ್ದರು.

Related posts

ಜೇಸಿ ಇಂಟರ್ನ್ಯಾಷನಲ್ ಆಂಗ್ಲಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಮಮತ ಕೆ.

Madhyama Bimba

ಅಜೆಕಾರಿನಲ್ಲಿ ನಾಳೆ (ಫೆ. 07ರಂದು) ಮಂದಾರ್ತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ

Madhyama Bimba

ಏ. 16: ಕುಚ್ಚೂರು ಕೊಡಮಣಿತ್ತಾಯ ಮತ್ತು ಧೂಮಾವತಿ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More